ನಮ್ಮ ಮಹಾನಗರದಲ್ಲಿ ರಸ್ತೆಗಳ ಪಾಡು ಗೋಳು ಆಗಿರುವುದು ಒಂದು ಸಮಸ್ಯೆಯಾದರೆ ಹೆದ್ದಾರಿಗಳಲ್ಲಿನ ನಾಯಿಗಳನ್ನು ಕಂಡರೆ ಅಯ್ಯೋ ಪಾಪ ಎನಿಸುತ್ತದೆ.
ಆಹಾರ ಹುಡುಕುತ್ತಲೋ, ಇನ್ನೇತಕ್ಕೋ ಅಮಾಯಕವಾಗಿ ರಸ್ತೆ ದಾಟುವ ನಾಯಿಗಳು ಯಮವೇಗದ ವಾಹನಗಳ ಹೊಡೆತಕ್ಕೆ ಸಿಕ್ಕಿ ಅಲ್ಲೇ ಹೆಣವಾಗುತ್ತವೆ. ಮತ್ತೆ ಹತ್ತಾರು ವಾಹನಗಳು ಅವುಗಳ ಮೇಲೆ ಚಲಿಸಿ ಕೊನೆಗೆ ರಸ್ತೆಗಂಟಿದ ಚರ್ಮ ಮಾತ್ರವಾಗಿ ಹೋಗುವವರೆಗೂ ದುರ್ನಾತ ಬೀರುತ್ತಾ ಬಿದ್ದಿರುತ್ತದೆ.
ಸಾರ್ವಜನಿಕರು ಮೂಗು, ಕಣ್ಣು ಮುಚ್ಚಿಕೊಂಡು ಮುಂದೆ ಹೋಗುವುದಲ್ಲದೆ ಬೇರೇನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಸತ್ತ ತಕ್ಷಣವೇ ಯಾರಾದರೂ ಅತ್ತ ಗಮನಹರಿಸಿದರೆ ಆದೀತು. ಆದರೆ ಅಂಥವರು ಯಾರಿದ್ದಾರೆ?
ಅವರ ಧಾವಂತ ಅವರಿಗೆ. ಹಾಗಾಗಿ ಈ ಕಳೇಬರಗಳ ವಿಲೇವಾರಿಯನ್ನು ಸ್ಥಳೀಯ ಆಡಳಿತದ ಸಹಾಯದಿಂದ ನಿಭಾಯಿಸಬೇಕು. ಯಾರೋ ಹುಚ್ಚು ಆವೇಶದಿಂದ ವಾಹನ ಚಲಾಯಿಸಿ ಬಲಿ ತೆಗೆದುಕೊಂಡ ಮೂಕ ಪ್ರಾಣಿಗಳ ರಕ್ತ ಮಾಂಸ ಇನ್ನೊಂದಷ್ಟು ವಾಹನಗಳ ಚಕ್ರಕ್ಕೆ ಮೆತ್ತಿಕೊಂಡು ಹೇಳಹೆಸರಿಲ್ಲದಂತಾಗುವುದನ್ನಾದರೂ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.