ADVERTISEMENT

ಹೊಂಡ ಮುಚ್ಚಿ

ಕೆ.ರಾಜೇಂದ್ರ ಬೆಂಡೆ, ಪಂಕ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಅಶೋಕನಗರ ವ್ಯಾಪ್ತಿಯ ವಿದ್ಯಾಪೀಠ ವಾರ್ಡಿನ ಸಂಖ್ಯೆ  164 ಹನುಮಂತ ನಗರ ಪೊಲೀಸ್ ಠಾಣೆ ಎದುರುಗಡೆ
ಇರುವ ಶ್ರೀನಿಕೆತನ ಬ್ಯೂಟಿ ಪಾರ್ಲರ್ ಎದುರು ಒಳಚರಂಡಿ ಮಂಡಳಿ ಯವರು ಡ್ರೈನೇಜ್  ರಿಪೇರಿಗಾಗಿ ಹೊಂಡ ತೋಡಿದ್ದಾರೆ. ಹತ್ತು ದಿನಗಳೇ ಕಳೆದರೂ ಅದನ್ನು ಮುಚ್ಚಿಲ್ಲ. ರಿಪೇರಿಯೂ ಆಗಿಲ್ಲ. 

ಆ ಹೊಂಡದೊಳಗೆ ಡ್ರೈನೇಜ್  ನೀರು ತುಂಬಿ ಸೊಳ್ಳೆಗಳ ವಾಸಸ್ಥಾನ ಆಗಿದೆ. ಅಕ್ಕ ಪಕ್ಕದ ಮನೆಯವರಿಗೂ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.