ADVERTISEMENT

‘ವೈಯಕ್ತಿಕ ಹಕ್ಕು?’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

‘ದಂಡವೂ ಇಲ್ಲ, ದಶಗುಣವೂ ಇಲ್ಲ’ (ವಾ. ವಾ., ಫೆ. 26.) ಜಪಾನಿ ತತ್ತ್ವಜ್ಞಾನಿ ಎಕ್ಕೆನ್ ಎಂಬಾ­ತನ ಈ ಉಕ್ತಿ ಅರ್ಥವತ್ತಾಗಿ ತೋರುವುದಿಲ್ಲವೆ?– ‘ಹಿಂದಿನ ಕಾಲದ ಪರಿಣತ ಋಷಿಗಳ ಉಪದೇಶ­ಗಳಿಗೆ ಕಿವಿಗೊಡುವುದು ಯೋಗ್ಯವೆಂದು ಜನ ಭಾವಿಸುತ್ತಿಲ್ಲ. ಪರಿಣಾಮವಾಗಿ, ಒಡೆಯ–ಸೇವಕರ, ಮೇಲಿನವರ–ಕೆಳಗಿನವರ, ಹಿರಿಯರ–ಕಿರಿಯರ ಆತ್ಮೀಯ ಸಂಬಂಧಗಳು ‘ವೈಯಕ್ತಿಕ ಹಕ್ಕು’ ಎಂಬ ವೇದಿಕೆಯ ಮೇಲೆ ಬಲಿಗೊಳ್ಳುತ್ತಿವೆ’ (ವಿಲ್ ಡ್ಯೂರಂಟ್ ಕೃತ ‘ನಾಗರಿಕತೆಯ ಕತೆ’ಯಲ್ಲಿ ಉದ್ಧೃತ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.