ADVERTISEMENT

ಎಚ್ಚೆತ್ತುಕೊಳ್ಳುವುದು ಎಂದು?

ಶಿವಮೊಗ್ಗ ರಮೇಶ್, ಮೈಸೂರು
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST

ಈಚಿನ ಕೆಲವು ವರ್ಷಗಳಲ್ಲಿ ಸಣ್ಣಪುಟ್ಟ ಜಗಳಗಳು, ಧಾರ್ಮಿಕ ದ್ವೇಷದ ಸ್ವರೂಪ ಪಡೆದು ಕೊಲೆಯಲ್ಲಿ ಅಂತ್ಯ ಕಾಣುತ್ತಿವೆ. ಆ ಮೂಲಕ ಸಮಾಜದ ಶಾಂತಿ ಕದಡುತ್ತಿವೆ.

ನಮ್ಮ ರಾಜಕೀಯ ಮುಖಂಡರು, ಎರಡು ದೋಣಿಗಳಲ್ಲಿ ಪಯಣಿಸುವ ಮಠಾಧೀಶರು ಮತ್ತು ‘ಒಂದು ಕಿಡಿ ಇಡೀ ಕಾಡನ್ನೇ ಹೊತ್ತಿ ಉರಿಸುತ್ತದೆ’ ಎಂಬ ಜ್ಞಾನವಿಲ್ಲದ ಜನರು ಇದಕ್ಕೆ ಹೊಣೆಗಾರರು. ಇಂತಹ ಘಟನೆಗಳಲ್ಲಿ ಪ್ರಾಣ ಕಳೆದುಕೊಳ್ಳುವವರು ಅಮಾಯಕ ಜನಸಾಮಾನ್ಯರು.

ಗಲಭೆಗೆ ಕುಮ್ಮಕ್ಕು ಕೊಟ್ಟವರು ದೂರದಲ್ಲೆಲ್ಲೋ ವಿಕೃತ ಸಂತೋಷದಿಂದ ಮೋಜು ಮಸ್ತಿಯಲ್ಲಿರುತ್ತಾರೆ. ಬಲಿಪಶುಗಳಾಗುತ್ತಿರುವವರು 20–30ರ ನಡುವಿನ ವಯಸ್ಸಿನ ಯುವಕರು ಎಂಬುದು ದುರಂತ. ಈ ಸ್ಥಿತಿ ಇನ್ನೆಷ್ಟು ದಿನ? ಯುವ ಪೀಳಿಗೆ ಎಚ್ಚೆತ್ತುಕೊಳ್ಳುವುದು ಯಾವಾಗ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.