ADVERTISEMENT

ತಪ್ಪು ಮಾಹಿತಿ

ಎಂ.ಜಿ.ರಾಘವನ್, ಸಾಗರ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST

ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 110 ಡಾಲರ್ ಇದ್ದದ್ದು ಈಗ 43 ಡಾಲರ್‌ಗೆ ಇಳಿದರೂ ಪೆಟ್ರೋಲ್–ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸುತ್ತಿಲ್ಲ ಎಂದು   ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ. ಆದರೆ ಇದು ತಪ್ಪು ಮಾಹಿತಿ. ಜನವರಿ 28ರಂದು ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್ ದಾಟಿತ್ತು. ಆದರೆ ಮುಖ್ಯಮಂತ್ರಿ ಪ್ರಕಾರ 43 ಡಾಲರ್‌ಗೆ ಒಂದು ಬ್ಯಾರೆಲ್ ಕಚ್ಚಾ ತೈಲ ಸಿಗುತ್ತದೆ. ಸಾಗರದಲ್ಲಿ ಜನವರಿ 6ರಂದು ಸಮಾವೇಶಕ್ಕೆ ಬಂದಾಗಲೂ ಇದೇ ಮಾತನ್ನು ಪುನರುಚ್ಚರಿಸಿದ್ದರು.

ಮುಖ್ಯಮಂತ್ರಿಯಾಗಿ ಈ ರೀತಿಯ ತಪ್ಪು ಮಾಹಿತಿ ಕೊಡುವುದು ಸರಿಯೇ? ಮುಖ್ಯಮಂತ್ರಿ ಪ್ರತಿದಿನ ಪತ್ರಿಕೆ ಓದುವುದಿಲ್ಲವೇ? ಅವರ ಪತ್ರಿಕಾ ಕಾರ್ಯದರ್ಶಿ ಏನು ಮಾಡುತ್ತಿದ್ದಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT