ADVERTISEMENT

ಅಕ್ರಮ ಬಯಲಾಗಲಿ

ಎ.ಬಿ.ಪಿರೆರಾ, ಬೆ೦ಗಳೂರು
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ತಲಾ ₹ 526 ಕೋಟಿ ಬೆಲೆಗೆ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಹಿಂದಿನ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಅದನ್ನು ದೇಶದ ಏಕೈಕ ಯುದ್ಧ ವಿಮಾನ ತಯಾರಿಕಾ ಸ೦ಸ್ಥೆ ಹಿ೦ದುಸ್ತಾನ್ ಏರೋನಾಟಿಕ್ಸ್ ಮೂಲಕ ಖರೀದಿಸುವುದು ನಿಗದಿಯಾಗಿತ್ತು. ಆದರೆ ಮೋದಿ ನೇತೃತ್ವದ ಸರ್ಕಾರ, ಯಾರಿಗೂ ಮಾಹಿತಿ ಕೊಡದೆ, ಈ ಒಪ್ಪ೦ದವನ್ನು ಏಕಾಏಕಿ ತಿರುಚಿ, ತಲಾ ₹ 1,500 ಕೋಟಿಗೂ ಹೆಚ್ಚಿನ ಬೆಲೆಗೆ ಖರೀದಿಸುವ ಒಪ್ಪ೦ದ ಮಾಡಿಕೊಂಡಿದೆ. ಜತೆಗೆ ಎಚ್ಎಎಲ್ ಸ೦ಸ್ಥೆಯನ್ನು ಇಡೀ ಪ್ರಕ್ರಿಯೆಯಿಂದ ಹೊರಗಿಟ್ಟು, ಅನನುಭವಿ ಖಾಸಗಿ ಸ೦ಸ್ಥೆಗೆ ಖರೀದಿ ವ್ಯವಹಾರವನ್ನು ಒಪ್ಪಿಸಿದೆ.

ರಾಷ್ಟ್ರೀಯ ಭದ್ರತೆಗೆ ಮಾರಕವಾಗಬಹುದೆಂಬ ಕಾರಣ ನೀಡಿ, ಈ ಒಪ್ಪ೦ದದ ವಿವರಗಳನ್ನು ಬಹಿರ೦ಗ ಪಡಿಸಲು ರಕ್ಷಣಾ ಸಚಿವಾಲಯ ನಿರಾಕರಿಸುತ್ತಿದೆ. ತಡವಾಗಿಯಾದರೂ ಎಚ್ಚೆತ್ತುಕೊಂಡ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರೆ, ಪ್ರಧಾನಿ ಮೋದಿ, ಬೇರೆ ವಿಚಾರಗಳ ಬಗ್ಗೆ ದೀರ್ಘ ಭಾಷಣ ಮಾಡಿರುವುದು ಖಂಡನೀಯ.

ADVERTISEMENT

ರಫೇಲ್‌ ಒಪ್ಪಂದದ ಬಗ್ಗೆ ವಿಸ್ತೃತ ತನಿಖೆ ನಡೆಸಿದರೆ ಇದು ಬೊಫೋರ್ಸ್‌ ಹಗರಣಕ್ಕಿಂತ ಎಷ್ಟು ದೊಡ್ಡ ಹಗರಣ ಎಂಬುದು ಬಯಲಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.