ADVERTISEMENT

ಆಧಾರ್‌ ತಿದ್ದುಪಡಿ ಉಚಿತವಾಗಲಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:11 IST
Last Updated 9 ಸೆಪ್ಟೆಂಬರ್ 2020, 16:11 IST

ಆಧಾರ್ ಕಾರ್ಡಿನಲ್ಲಿ ತಿದ್ದುಪಡಿ ಮಾಡಲು ಇಲ್ಲಿಯವರೆಗೆ ಇದ್ದ 50 ರೂಪಾಯಿ ಶುಲ್ಕವನ್ನು 100 ರೂಪಾಯಿಗೆ ಹೆಚ್ಚಿಸಿರುವುದು ಕೊರೊನಾ ಸೋಂಕಿನ ಈ ಪರಿಸ್ಥಿತಿಯಲ್ಲಿ ಸೂಕ್ತ ನಿರ್ಧಾರ ಎನಿಸುವುದಿಲ್ಲ. ನೋಡಲು ಇದು ಸಣ್ಣ ಮೊತ್ತದಂತೆ ಕಾಣಬಹುದು. 100 ರೂಪಾಯಿಯ ಬೆಲೆ ಕೂಲಿ ಮಾಡುವವನಿಗೆ, ಮೂಟೆ ಹೊರುವವನಿಗೆ, ಮನೆ ಕೆಲಸದವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗೆಯೇ ಈ ತಿದ್ದುಪಡಿಗಳು ಆಗುತ್ತಿರುವುದು ಕೂಡ ಇಂತಹ ವರ್ಗಗಳಿಂದಲೇ ಅತೀ ಹೆಚ್ಚು.

ಆಧಾರ್ ಕಾರ್ಡ್ ಎಂಬುದು ದೇಶದಲ್ಲಿ ಅತ್ಯಂತ ಅಗತ್ಯವಾದ ದಾಖಲೆಯಾಗಿದೆ. ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಆಧಾರ್ ಕಾರ್ಡ್ ಅನ್ನು ಹೊಸದಾಗಿ ನೋಂದಣಿ ಮಾಡುವುದಕ್ಕಿಂತ ತಿದ್ದುಪಡಿ ಮಾಡಿಸುವವರ ಸಂಖ್ಯೆ ಅತೀ ಹೆಚ್ಚು. ಇದಕ್ಕೆ ನಾನಾ ಕಾರಣಗಳಿರಬಹುದು. ಇಂತಹ ಸಣ್ಣಪುಟ್ಟ ಹೊರೆಯನ್ನು ಬಡವರ ಮೇಲೆ ಹೊರಿಸುವ ಬದಲು ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ತಿದ್ದುಪಡಿ ಮಾಡಿಕೊಡಬೇಕಾದ ಜವಾಬ್ದಾರಿ ಯನ್ನು ಸರ್ಕಾರವೇ ಹೊರಬೇಕು. ಬಿಪಿಎಲ್‌ ಕಾರ್ಡ್‌ನ ದತ್ತಾಂಶಗಳೆಲ್ಲ ಈಗ ಆನ್‌ಲೈನ್‌ನಲ್ಲಿ ಲಭ್ಯವಿವೆ. ಆಧಾರ್ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಬಿಪಿಎಲ್‌ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ ಅರ್ಹರಿಗೆ ಈ ಸೌಲಭ್ಯವನ್ನು ಒದಗಿಸಿಕೊಡುವ ಔದಾರ್ಯವನ್ನು ಸರ್ಕಾರ ತೋರಲಿ.

– ಸರ್ದಾರ್ ಎಂ. ತನಾಝ್,ಅರಸೀಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.