ADVERTISEMENT

ಮೃತ್ಯು ‘ಪ್ರವಾಸ’: ಎಚ್ಚರಿಕೆ ಬೇಕು

ತ್ಯಾಗರಾಜ್ ಆನೆಕೊಂಡ
Published 29 ಏಪ್ರಿಲ್ 2019, 18:30 IST
Last Updated 29 ಏಪ್ರಿಲ್ 2019, 18:30 IST

ರಾಜ್ಯದ ಬಹುತೇಕ ಐತಿಹಾಸಿಕ ಸ್ಥಳಗಳಲ್ಲಿ ಅಪಾಯಕಾರಿಯಾದ ಹೊಂಡ, ಬಾವಿ, ನದಿ ಇರುವುದು ಸಾಮಾನ್ಯ. ಪ್ರವಾಸಿ ತಾಣಗಳಾಗಿರುವುದರಿಂದ ಅನೇಕ ಜನರು ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಅಪಾಯಕಾರಿ ಸ್ಥಳಗಳಿಗೆ ಹೋಗಿ ಅನೇಕರು ಸಾವನ್ನಪ್ಪುತ್ತಲೇ ಇದ್ದಾರೆ.

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಸಿದ್ಧರ ಬೆಟ್ಟದಲ್ಲಿ ಇತ್ತೀಚೆಗೆಒಂದೇ ಕುಟುಂಬದ ನಾಲ್ವರು ಸದಸ್ಯರು ಹಾಗೂ ಚಿತ್ರದುರ್ಗದಲ್ಲಿ ಒಬ್ಬ ಮಹಿಳೆ ಹೊಂಡಕ್ಕೆ ಬಿದ್ದುಮೃತಪಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಹುಚ್ಚಂಗಿದುರ್ಗದಲ್ಲಿ ಖಾಸಗಿ ಬಸ್ ಹೊಂಡಕ್ಕೆ ಬಿದ್ದು ಸುಮಾರು ಜನ ಮೃತಪಟ್ಟಿದ್ದರು. ಆದರೂ ಇಂತಹ ಘಟನೆಗಳು ಇಂದಿಗೂ ನಡೆಯುತ್ತಲೇ ಇರುವುದು ವಿಷಾದನೀಯ.

ಸಂಬಂಧಪಟ್ಟ ಇಲಾಖೆ ಅಂತಹ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿ ಜನರಿಗೆ ಮಾಹಿತಿ ನೀಡಬೇಕು. ಅಪಾಯಕಾರಿ ಸ್ಥಳಗಳಲ್ಲಿ ಕಾವಲುಗಾರರನ್ನು ನೇಮಿಸಿ, ಅವಘಡಗಳನ್ನು ತಪ್ಪಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.