ADVERTISEMENT

ಇದೂ ಶೋಷಣೆಯೇ!

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 20:15 IST
Last Updated 9 ಅಕ್ಟೋಬರ್ 2018, 20:15 IST

ಸಿನಿಮಾ ಜಗತ್ತಿನಲ್ಲಿ ನಡೆಯುವ ಸ್ತ್ರೀ ಶೋಷಣೆಯ ಚಿತ್ರಗಳು ಈಗ ಒಂದೊಂದಾಗಿ ಬಯಲಾಗುತ್ತಿವೆ.

ಮನರಂಜನೆಯ ಜಗತ್ತಿನಲ್ಲಿ ಶೋಷಣೆಯು ಲೈಂಗಿಕ ವಿಷಯಕ್ಕೆ ಮಾತ್ರ ಸೀಮಿತವಾದದ್ದು ಎಂದೆನಿಸುವುದಿಲ್ಲ. ಸ್ತ್ರೀ ಪಾತ್ರಗಳನ್ನು ಕ್ರೂರವಾಗಿ, ಅಸಂಬದ್ಧ ರೀತಿಯಲ್ಲಿ ಚಿತ್ರಿಸುವುದು, ಆ ಪಾತ್ರಗಳಿಗೆ (ಅವಶ್ಯವಿರಲಿ ಇಲ್ಲದಿರಲಿ) ಕನಿಷ್ಠ ಬಟ್ಟೆ ತೊಡಿಸಿ, ಅಸಭ್ಯ ರೀತಿಯಲ್ಲಿ ನರ್ತಿಸುವಂತೆ ಮಾಡುವುದು, ವಿಪರೀತವಾಗಿ ಹಿಂಸಿಸಿ ಗೋಳಾಡಿಸುವುದು... ಇವೆಲ್ಲವೂ ಶೋಷಣೆಗಳೇ.

‘ಪ್ರೇಕ್ಷಕರ ಅಭಿರುಚಿಗೆ ತಕ್ಕಂಥ ಚಿತ್ರ, ಧಾರಾವಾಹಿಗಳನ್ನು ಮಾಡುತ್ತಿದ್ದೇವೆ’ ಎಂದು ಹೇಳುವುದು ಕೆಲ ನಿರ್ಮಾಪಕ, ನಿರ್ದೇಶಕರ ಚಾಳಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೃಜನಶೀಲತೆಯ ಹೆಸರಿನಲ್ಲಿ ಪ್ರತ್ಯಕ್ಷವಾಗಿಯಾಗಲೀ ಅಥವಾ ಪರೋಕ್ಷವಾಗಿಯಾಗಲೀ ಸ್ತ್ರೀಯರನ್ನು ಶೋಷಿಸುವುದು ಸರಿಯಲ್ಲ. ಹೀಗೆ ನಾನಾ ರೂಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರನ್ನು ಪ್ರಜ್ಞಾವಂತ ವೀಕ್ಷಕರೇ ಬಹಿಷ್ಕರಿಸುವುದು ಒಳಿತು.

ADVERTISEMENT

ರಮೇಶ್, ಉತ್ತರಹಳ್ಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.