ಪೆಟ್ರೋಲ್ ಬೆಲೆ ಏರಿಕೆಯನ್ನು ನಿಯಂತ್ರಿಸಲುಕ್ರಮ ಕೈಗೊಳ್ಳದಿರುವ ಸರ್ಕಾರದ ನಿಲುವನ್ನು ಖಂಡಿಸಲೇಬೇಕು. ಸರ್ಕಾರದ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸುವುದು ಜನರ ಹಕ್ಕು. ಎಲ್ಲ ಸರಿ, ಆದರೆ ಇಂಥ ಪ್ರತಿಭಟನೆಗಾಗಿ ಮೂಕ ಪ್ರಾಣಿಗಳನ್ನು ಹಿಂಸಿಸುವುದು ಅಮಾನವೀಯ.
ಭಾರತ್ ಬಂದ್ ಅಂಗವಾಗಿ ಬೆಂಗಳೂರಿನಲ್ಲಿ ನಡೆಸಿದ್ದ ಪ್ರತಿಭಟನೆಯಲ್ಲಿ, ಗಾಡಿಯ ಮೇಲೇರಿದ್ದ ಹತ್ತಕ್ಕೂ ಹೆಚ್ಚು ಜನರನ್ನು ಎಳೆಯಲು ಎತ್ತುಗಳನ್ನು ಬಳಸಿರುವುದು ಖಂಡನೀಯ. ರಾಜಕೀಯ ನಾಯಕರ ತೆವಲಿಗೆ ಕತ್ತೆ, ಎಮ್ಮೆ, ಎತ್ತುಗಳಂತಹ ಮೂಕ ಪ್ರಾಣಿಗಳು ಬಲಿಪಶುಗಳಾಗಬೇಕೇ?
ಸಿ. ಕೃಷ್ಣ, ಲಕ್ಕವನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.