ADVERTISEMENT

ಜನಪ್ರಿಯ ಬೇಡ, ‘ಜನಪರ’ ಯೋಜನೆ ಜಾರಿಗೆ ತನ್ನಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 20:01 IST
Last Updated 18 ಆಗಸ್ಟ್ 2019, 20:01 IST

ಕಡುಬಡವರಿಗಾಗಿ ತಮ್ಮ ಅವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ರದ್ದು ಮಾಡಿದ್ದೇ ಆದರೆ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ ಎಷ್ಟೆಲ್ಲಾ ಜನಪ್ರಿಯ ‘ಭಾಗ್ಯ’ಗಳನ್ನು ಜಾರಿಗೆ ತಂದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಸೋತು ಸುಣ್ಣವಾಗಿದ್ದೇಕೆ ಎಂಬ ಬಗ್ಗೆ ಈ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ‘ಜನಪ್ರಿಯ’ ಯೋಜನೆಗಳನ್ನು ಜಾರಿಗೆ ತಂದು ಅಗ್ಗದ ಪ್ರಚಾರ ಪಡೆಯುವುದರ ಬದಲು ‘ಜನಪರ’ ಯೋಜನೆಗಳನ್ನು ಜಾರಿಗೆ ತಂದಿದ್ದರೆ ಮತದಾರ ಕೈಹಿಡಿಯುತ್ತಿದ್ದನೇನೋ?

-ಡಿ.ಪ್ರಸನ್ನಕುಮಾರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT