ADVERTISEMENT

ಕೃಷಿ ಮಾರುಕಟ್ಟೆಗಳಲ್ಲಿ ಅಧಿಕೃತ ಬಿಲ್‌ ಕೊಡಿಸಿ

ಲಕ್ಷ್ಮೀಕಾಂತರಾಜು ಎಂ.ಜಿ., ಮಠಗ್ರಾಮ
Published 26 ಜೂನ್ 2018, 16:22 IST
Last Updated 26 ಜೂನ್ 2018, 16:22 IST

ಕೃಷಿ ಮಾರುಕಟ್ಟೆಗಳಲ್ಲಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮಂಡಿಗಳವರಾಗಲೀ, ಕಮಿಷನ್ ಏಜೆಂಟರಾಗಲೀ ರೈತರಿಗೆ ಅಧಿಕೃತ ಬಿಲ್ ನೀಡುವುದಿಲ್ಲ. ಬದಲಿಗೆ ಸಣ್ಣ ಸಣ್ಣ ಚೀಟಿಗಳಲ್ಲೇ ವ್ಯವಹಾರ ಮುಗಿಸುತ್ತಾರೆ.

ತೆಂಗು, ಅಡಿಕೆ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುವ ರೈತರು ಹಲವು ಲಕ್ಷ ರೂಪಾಯಿಗಳ ವಹಿವಾಟುನಡೆಸುತ್ತಾರೆ. ಆದರೆ ಯಾವುದಕ್ಕೂ ಬಿಲ್‌ ಇರುವುದಿಲ್ಲ.

ರೈತರ ಬೆಳೆಗಳಿಗೆ ಬಿಲ್‌ ಕೊಡುವ ವ್ಯವಸ್ಥೆಯೇ ಇಲ್ಲದಿದ್ದರೆ ರೈತರ ಆದಾಯಕ್ಕೆ ದಾಖಲೆ ಯಾವುದು? ಆದ್ದರಿಂದ, ರಾಜ್ಯದ ಎಲ್ಲ ಕೃಷಿ ಉತ್ಪನ್ನ‌ ಮಾರುಕಟ್ಟೆಗಳಲ್ಲಿ ವರ್ತಕರು ಕಡ್ಡಾಯವಾಗಿ ಬಿಲ್‌ ನೀಡುವಂತೆ ವ್ಯವಸ್ಥೆ ಮಾಡಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.