ADVERTISEMENT

ಓದುಗರ ಪತ್ರ | ರಾಮಮಂದಿರ ಶಿಲಾನ್ಯಾಸ ಅಡ್ವಾಣಿಯವರಿಂದ ನಡೆದರೆ ಅರ್ಥಪೂರ್ಣ

‘ಅಡ್ವಾಣಿ ಹೋರಾಟದ ಫಲಶ್ರುತಿ’

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST
ಎಲ್‌.ಕೆ. ಅಡ್ವಾಣಿ (ಸಂಗ್ರಹ ಚಿತ್ರ)
ಎಲ್‌.ಕೆ. ಅಡ್ವಾಣಿ (ಸಂಗ್ರಹ ಚಿತ್ರ)   

ಅಯೋಧ್ಯೆಯ ಬಹುನಿರೀಕ್ಷಿತ ರಾಮಮಂದಿರಕ್ಕೆ ಮುಂದಿನ ತಿಂಗಳು ಶಿಲಾನ್ಯಾಸ ಆಗಲಿದೆ ಎಂದು ವರದಿಯಾಗಿದೆ. ಈ ರಾಮಮಂದಿರ ನಿರ್ಮಾಣದ ಚಿಂತನೆಗೆ ಚಾಲನೆ ನೀಡಿದವರು ಲಾಲ್‌ಕೃಷ್ಣ ಅಡ್ವಾಣಿ. ದೇಶದ್ಯಾದಂತ ಅವರು ನಡೆಸಿದ ರಥಯಾತ್ರೆ ಮತ್ತು ಇಟ್ಟಿಗೆ ಸಂಗ್ರಹವೇ ಇದಕ್ಕೆ ಸ್ಫೂರ್ತಿ ನೀಡಿದ್ದು ಮತ್ತು ಈ ಹಂತಕ್ಕೆ ಬಂದಿದ್ದು.

ದೇಶದ ಪ್ರಧಾನಿಯಿಂದ ಶಿಲಾನ್ಯಾಸ ನಡೆಯುವುದು ಹೆಮ್ಮೆಯ ವಿಚಾರವಾದರೂ ಈ ಕಾರ್ಯ ಹಿರಿಯ ರಾಜಕಾರಣಿ ಮತ್ತು ಮುತ್ಸದ್ದಿ ಅಡ್ವಾಣಿಯವರಿಂದ ನಡೆದರೆ, ಶಿಲಾನ್ಯಾಸ ಕಾರ್ಯಕ್ರಮ ಇನ್ನೂ ಹೆಚ್ಚು ಅರ್ಥಪೂರ್ಣವಾಗುವುದರಲ್ಲಿ ಸಂದೇಹವಿಲ್ಲ. ತಮ್ಮ ಜೀವಮಾನದ ಹೋರಾಟದ ಫಲಶ್ರುತಿಯನ್ನು ನೋಡಿ ಅವರು ಸಾರ್ಥಕತೆಯನ್ನು ಅನುಭವಿಸಬಹುದು.

ADVERTISEMENT

- ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.