ADVERTISEMENT

ಜನರ ಹಕ್ಕು ಕಸಿಯುವ ಸಂಭ್ರಮ ಬೇಡ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 19:30 IST
Last Updated 16 ಡಿಸೆಂಬರ್ 2020, 19:30 IST

ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಮತ್ತು ಹೊಸ ವರ್ಷದ ಆಚರಣೆ ಆಸುಪಾಸಿನಲ್ಲಿ ಬರುತ್ತಿವೆ. ಕೊರೊನಾ ಹಾವಳಿ ತಕ್ಕಮಟ್ಟಿಗೆ ಕಡಿಮೆಯಾಗಿದ್ದರೂ ಅದರ ಎರಡನೇ ಅಲೆಯ ಭೀತಿ ಇದ್ದೇ ಇದೆ. ಮತ್ತೊಂದೆಡೆ, ಚಳಿಗಾಲದ ಶೀತಗಾಳಿ ಜನರ ಆರೋಗ್ಯದ‌ ಮೇಲೆ‌ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಹೊಸ ವರ್ಷ ಮತ್ತು ಚುನಾವಣಾ ಗೆಲುವಿನ ಆಚರಣೆಗಳಿಗೆ ಪಟಾಕಿ ಸುಡುವ ಪದ್ಧತಿ ಅಪಾಯಕಾರಿ‌ ಬೆಳವಣಿಗೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಪ್ರಸ್ತುತ ಗಾಳಿಯ ಗುಣಮಟ್ಟ ಗಣನೀಯವಾಗಿ ಕಳಪೆಯಾಗಿದೆ. ಇಂತಹ ಸಂದರ್ಭದಲ್ಲಿ ಪಟಾಕಿ ಸುಟ್ಟು ಗಾಳಿಯ ಗುಣಮಟ್ಟವನ್ನು ಮತ್ತಷ್ಟು ಹಾಳುಗೆಡುವುದು ಬೇಡ.‌ ನಮ್ಮ ಅಭ್ಯರ್ಥಿಗಳಿಗಾಗಲೀ ಅವರ ಅನುಯಾಯಿಗಳಿಗಾಗಲೀ ‌ವಾಯುಮಾಲಿನ್ಯದ ಕುರಿತು ವಿಪರೀತ ಅಜ್ಞಾನ. ಹೀಗಾಗಿ ಪಟಾಕಿ ಹೊಡೆಯುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಗೆಲುವಿನ ಭರದಲ್ಲಿ ಪಟಾಕಿಗಳನ್ನು‌ ಸುಡುವ ಅಭ್ಯರ್ಥಿಗಳ ಅರ್ಹತೆಯನ್ನು ಅನೂರ್ಜಿತಗೊಳಿಸುವ ನಿಯಮವನ್ನು ಜಾರಿಗೆ ತರಬೇಕು. ಶುದ್ಧ ಉಸಿರು ಸಾರ್ವಜನಿಕರ ಹಕ್ಕು. ಅದನ್ನು ಕಸಿದು ಸಂಭ್ರಮಿಸುವ ಅವಕಾಶಗಳಿಗೆ ನಿಷೇಧ ಹೇರಬೇಕು.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.