‘ಅರ್ಜಿ ಸಲ್ಲಿಸಿದ ಒಂದು ದಿನದಲ್ಲೇ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಆದೇಶ ಹೊರಡಿಸಲು ಅವಕಾಶ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು’ ಎಂದು ಕಂದಾಯ ಸಚಿವರು ಹೇಳಿರುವುದು (ಪ್ರ.ವಾ., ಡಿ. 9) ಸಂತೋಷದ ಸಂಗತಿ. ಆದರೆ ಸರ್ಕಾರ ಈ ಯೋಜನೆಯನ್ನು ಆತುರಾತುರವಾಗಿ ಜಾರಿಗೆ ತರದೆ, ಅದನ್ನು ಪರಿಶೀಲಿಸಿ, ತಜ್ಞರಿಂದ ಸಲಹೆ ಪಡೆಯುವುದು ಸೂಕ್ತ.
ಏಕೆಂದರೆ ಅಸಲಿ ದಾಖಲೆಗಳನ್ನು ಮೀರಿಸುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಯೋಜನೆಗಳ ಸದುದ್ದೇಶವನ್ನೇ ಬುಡಮೇಲು ಮಾಡುವ ಚಾಣಾಕ್ಷರು ನಮ್ಮಲ್ಲಿ ಇದ್ದಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ.
- ರಾ.ಬಾ.ವರದರಾಜನ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.