ADVERTISEMENT

ಕೊಳವೆ ಬಾವಿ ಅವಘಡ ತಡೆಗೆ ಇಚ್ಛಾಶಕ್ತಿ ಬೇಕು

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:00 IST
Last Updated 19 ಜೂನ್ 2019, 20:00 IST

ದೇಶದ ಒಂದಲ್ಲ ಒಂದು ಕಡೆ ತೆರೆದ ಕೊಳವೆಬಾವಿಗಳಲ್ಲಿ ಪುಟ್ಟ ಮಕ್ಕಳು ಬೀಳುವುದು, ಅವರನ್ನು ಹೊರತೆಗೆಯಲು ಸರ್ಕಾರಗಳು ಸತತ ಕಾರ್ಯಾಚರಣೆ ನಡೆಸುವುದು, ಹಲವು ಬಾರಿ ಅವು ವಿಫಲವಾಗಿ ಮಕ್ಕಳು ಅಸುನೀಗುವುದು ನಡೆಯುತ್ತಲೇ ಇದೆ.

ಇಂತಹ ಪ್ರತೀ ಘಟನೆ ನಡೆದಾಗಲೂ ಸರ್ಕಾರದ ವಿರುದ್ಧ ಜನ ದನಿ ಎತ್ತುತ್ತಾರೆ. ಆಗ ಸರ್ಕಾರವು ಕೊಳವೆಬಾವಿಗಳಿಗೆ ಸಂಬಂಧಿಸಿದಂತೆ ಈಗ ಇರುವುದಕ್ಕಿಂತ ಇನ್ನೂ ಕಠಿಣ ನೀತಿ ರೂಪಿಸುವುದಾಗಿ ಹೇಳುತ್ತದೆ. ಆದರೆ ಈವರೆಗೆ ಅಂತಹ ಯಾವ ನೀತಿಯೂ ಪರಿಣಾಮಕಾರಿಯಾಗಿ ಜಾರಿಗೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿಯೇ ಪದೇಪದೇ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಅದನ್ನು ತಡೆಯಲು ಇಚ್ಛಾಶಕ್ತಿ ಬೇಕು.

–ಕು.ಸ.ಮಧುಸೂದನ,ರಂಗೇನಹಳ್ಳಿ, ತರೀಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.