ADVERTISEMENT

ಪೊಲೀಸ್‌ ಇಲಾಖೆಯಲ್ಲಿ ಬ್ರಿಟಿಷ್‌ ಪ‍ಳೆಯುಳಿಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 19:45 IST
Last Updated 11 ಮೇ 2021, 19:45 IST

ನನ್ನ ಮಗ ಭಾನುವಾರ ಬೆಳಿಗ್ಗೆ 7.30ಕ್ಕೆ ಔಷಧ ತರಲು ಅಂಗಡಿಗೆ ಹೋಗಿ ಬರುವಾಗ ‍ಪೊಲೀಸರಿಗೆ ಸಿಕ್ಕಿಬಿದ್ದ. ತನ್ನ ಕೈಲಿರುವ ಔಷಧ ತೋರಿಸಿದರೂ ಬಿಡದ ಪೊಲೀಸರು ಅವನ ಗಾಡಿಯನ್ನು ಕಸಿದುಕೊಂಡು ಠಾಣೆಗೆ ಕರೆದೊಯ್ದದ್ದು ತಿಳಿದಾಗ ದಿಗಿಲುಗೊಂಡು ನಾನೂ ಅಲ್ಲಿಗೆ ಹೋದೆ. ‘ವಾಹನ ಒಯ್ಯಬಾರದೆಂಬ ನಿಯಮ ಅನ್ವಯಿಸುವುದು ಮೇ 10ರಿಂದ, ಇಂದು 9ನೇ ತಾರೀಖು. ಆದರೂ ಈ ದಿನವೇ ಹೀಗೇಕೆ’ ಎಂದು ಕೇಳಿ ವಾಹನ ಬಿಡಲು ಬೇಡಿಕೊಂಡೆ. ಸಣ್ಣ ವಯಸ್ಸಿನ ಪೊಲೀಸರ ಮಾತು, ವರ್ತನೆ ತುಂಬಾ ಬೇಸರ ತರಿಸಿತು. ಅಧಿಕಾರಿಯೂ ಸಣ್ಣ ವಯಸ್ಸಿನವರೆ. ಆದರೆ ಪೊಲೀಸ್‌ ಇಲಾಖೆಯಲ್ಲಿ ಬ್ರಿಟಿಷರ ಪಳೆಯುಳಿಕೆ ಮೊಳಕೆಯೊಡೆದು ಬೆಳೆಯುತ್ತಿರುವುದು ದುರಂತ.

ಆಧುನಿಕ ಬದುಕು ಎಷ್ಟು ಮಾನವೀಯತೆಯಿಂದ ಬೆಳೆಯಬೇಕಿತ್ತೋ ಅದಕ್ಕೆ ವಿರುದ್ಧವಾಗಿ ಪೊಲೀಸ್‌ ಅಧಿಕಾರಿಗಳು ವರ್ತಿಸುತ್ತಿರುವುದು ವಿಷಾದಕರ ಸಂಗತಿ. ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಇತ್ತ ಚಿತ್ತಹರಿಸದಿದ್ದರೆ ಪೊಲೀಸ್‌ ಗೂಂಡಾಗಿರಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.

–ಡಾ. ಸಿ.ಬಿ.ಚಿಲ್ಕರಾಗಿ, ಲಿಂಗಸುಗೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.