ರಾಜ್ಯದ ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ನೀಡದಿರುವುದು ವಿಷಾದನೀಯ. ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದು, ಬಿಸಿಲು ಮಳೆ ಎನ್ನದೆ ಜೈಕಾರ ಹಾಕುತ್ತಾ, ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುವ ಮಹಿಳೆಯನ್ನು ಅಷ್ಟಕ್ಕೇ ಸೀಮಿತ ಮಾಡಬಾರದು. ಸರ್ವರಿಗೂ ಸಮಪಾಲು ಎಂದು ನುಡಿದರೆ ಸಾಲದು, ಅದನ್ನು ನಡೆಯಲ್ಲೂ ತೋರಿಸಬೇಕು. ಪಕ್ಷದ ವಿರುದ್ಧ ಬಂಡೆದ್ದು ವಿರೋಧಿಸುವ ಮನಃಸ್ಥಿತಿ ಮಹಿಳೆಯರಿಗೆ ಇರುವುದಿಲ್ಲ. ಇದನ್ನೇ ಅವರ ದೌರ್ಬಲ್ಯ ಎಂದು ತಿಳಿಯಬಾರದು.
ಇಂದಿರಾ ಶ್ರೀಧರ್, ಮಳಲಕೆರೆ, ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.