ADVERTISEMENT

ಕ್ಯಾಸ್ಟ್‌ ಈಸ್‌ ದಿ ಕಿಂಗ್...

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 18:28 IST
Last Updated 3 ಜೂನ್ 2021, 18:28 IST

ಮುಖ್ಯಮಂತ್ರಿಯೊಂದಿಗೆ ಮುನಿಸಿಕೊಂಡಿರುವ ಸಿ.ಪಿ‌.ಯೋಗೇಶ್ವರ್ ಅವರು ದೆಹಲಿ ಭೇಟಿಯ ನಂತರ ಮಠಾಧೀಶರನ್ನು ಭೇಟಿ ಮಾಡಿದ್ದಾರೆ. ಇದು, ತಮ್ಮ ರಾಜಕೀಯ ಜೀವನದ ಮುಂದಿನ ಹೆಜ್ಜೆ ಕುರಿತು ಸಲಹೆ ಪಡೆಯುವ ಸಲುವಾಗಿ ಆಗಿರಬಹುದು. ಪ್ರಜಾಪ್ರಭುತ್ವದಲ್ಲಿ ಮತದಾರನೇ ಮಹಾಪ್ರಭು. ಮತದಾರನ ಕೃಪಾ ಕಟಾಕ್ಷವಿಲ್ಲದೆ ಯಾವ ರಾಜಕಾರಣಿಯೂ ಚಾಲ್ತಿಯಲ್ಲಿ ಇರುವುದಿಲ್ಲ. ಹಾಗಿದ್ದರೂ ಮತದಾರ ನೆನಪಾಗುವುದು ಚುನಾವಣೆಯಲ್ಲಿ ಮಾತ್ರ.

ಸರ್ಕಾರದಲ್ಲಿ ಮಂದಿರ, ಮಸೀದಿ, ಚರ್ಚುಗಳ ಪ್ರಭಾವ ಇರಬಾರದು ಎಂದು ಸಂವಿಧಾನ ಪ್ರತಿಪಾದಿಸುತ್ತದೆ. ಅಂತಹ ಸಂವಿಧಾನವನ್ನು ಜಾರಿಗೆ ತಂದು ಏಳು ದಶಕಗಳೇ ಕಳೆದಿದ್ದರೂ ನಾವು ಸಂವಿಧಾನ ಪಾಲನೆಯಲ್ಲಿ ಹಿಂದೆ ಬಿದ್ದಿದ್ದೇವೆ. ಸಂತೃಪ್ತ, ಅತೃಪ್ತ, ಮಾಜಿ, ಹಾಲಿ, ಭಾವಿ ರಾಜಕಾರಣಿಗಳೆಲ್ಲರೂ ಮಠಾಧೀಶರನ್ನು ಗೋಪ್ಯವಾಗಿ ಭೇಟಿ ಮಾಡುವುದು ಪ್ರಜಾಪ್ರಭುತ್ವದ ಹಿಮ್ಮುಖ ಚಲನೆಯಂತೆ ಭಾಸವಾಗುತ್ತದೆ. ಜೊತೆಗೆ ಇದರಿಂದ ‘ಕ್ಯಾಸ್ಟ್‌ ಈಸ್‌ ದಿ ಕಿಂಗ್‌ ಮೇಕರ್‌ ಆಫ್‌ ದಿಸ್‌ ಕಂಟ್ರಿ’ ಎಂಬ ಕುಹಕ ನುಡಿಗೆ ಇಂಬು ಕೊಟ್ಟಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT