ADVERTISEMENT

ದುರಿತ ಕಾಲದಲ್ಲಿ ಸ್ವಾಗತಾರ್ಹ ಸಂದೇಶ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಏಪ್ರಿಲ್ 2022, 19:31 IST
Last Updated 4 ಏಪ್ರಿಲ್ 2022, 19:31 IST

ಪ್ರಸ್ತುತ ಭಿನ್ನ ರಾಜಕೀಯ ಸಿದ್ಧಾಂತದ ಕಾರ್ಯಕರ್ತರು ತಂತಮ್ಮ ಪಕ್ಷದ ಹಿತಾಸಕ್ತಿಯ ಕಾರಣಕ್ಕಾಗಿ ಬಸವ, ಕುವೆಂಪು ಆದಿಯಾಗಿ ಕಟ್ಟಿ ಬೆಳೆಸಿದ ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಕೋಮು ದ್ವೇಷದ ಕಿಡಿ ಹಾರಿಸುವ ಯತ್ನದಲ್ಲಿದ್ದಾರೆ. ಇಂಥ ದುರಿತ ಕಾಲದಲ್ಲಿ ಆರ್ಯ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅವರು ಶುಭಕೃತು ಸಂವತ್ಸರದ ಅನ್ವರ್ಥ ಯುಗಾದಿ ಸಂದೇಶವಾಗಿ ‘ಅನ್ಯಧರ್ಮದ ಮೇಲೆ ಕಟ್ಟುಪಾಡು ಹೇರಿಕೆ ಸಲ್ಲದು’ ಎಂದೂ, ‘ನಮ್ಮ ಸಂವಿಧಾನವೇ ನಮ್ಮ ದೇವರು’ ಎಂದೂ ಮುತ್ತಿನಂಥ ಮಾತನಾಡಿರುವುದು (ಪ್ರ.ವಾ., ಏ. 4) ಸ್ವಾಗತಾರ್ಹ. ಬೇರೆ ಬೇರೆ ಜಾತಿ ಜನಾಂಗದ ಮಠಾಧೀಶರೂ ಇಂಥ ಕಿವಿಮಾತನ್ನು ತಂತಮ್ಮ ಸಮೂಹದ ಯುವಜನರಿಗೆ ಹೇಳುವುದಾದರೆ ಕೋಮು ಸೌಹಾರ್ದ ಗರಿಗಟ್ಟುವುದರಲ್ಲಿ ಸಂಶಯವಿಲ್ಲ.

- ಪ್ರೊ. ಶಿವರಾಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT