ADVERTISEMENT

ವಾಚಕರ ವಾಣಿ: ಭುವಿಯೆ ಅರಳದೆ ದಿವವಾಗಿ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 18 ಮೇ 2022, 19:45 IST
Last Updated 18 ಮೇ 2022, 19:45 IST

‘ಕಾಂಗ್ರೆಸ್‍ನವರು ಪ್ರಶ್ನಿಸಬೇಕಿರುವುದು...’ ಎಂಬ ಗುರುದೇವ ಭಂಡಾರ್ಕರ್ ಅವರ ಪತ್ರ (ವಾ.ವಾ., ಮೇ 17) ಅತ್ಯಂತ ಮಾರ್ಮಿಕ ವ್ಯಂಗ್ಯವೇ ಸರಿ. ಕೊಟ್ಟ ವಾಗ್ದಾನದಂತೆ ನಡೆದುಕೊಳ್ಳಲು ರಾಜಕಾರಣಿಗಳೇನು ದೇವತೆಗಳೇ? ಅಂದಮೇಲೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮಾತೇನು? ಇದು ಮತದಾರ ಪ್ರಭು ‘ಗುರುದೇವರು’ಗಳಿಗೂ ಗೊತ್ತು. ಆದರೂ ನಡೆಯುತ್ತಿದೆ ‘ಪ್ರಜಾತಂತ್ರ’ವೆಂಬ ಈ ಬೀದಿನಾಟಕ ಅನುದಿನವೂ ಅನುಕ್ಷಣವೂ! ನಾವು ವೋಟು ಹಾಕಲು ಇಷ್ಟಾದರೂ ಮನರಂಜನೆ ಬೇಡವೇ? ಇಷ್ಟಕ್ಕೂ ಈ ರಾಜಕಾರಣಿಗಳು ಕೊಟ್ಟ ವಾಗ್ದಾನಗಳೆಲ್ಲ ನಿಜವಾಗುವುದಾದರೆ ‘ಭುವಿಯೆ ಅರಳದೆ ದಿವವಾಗಿ’!

-ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT