ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ಶಾರದಾ ದೇವಿ ಅವರ 168ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ, ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಮಾತೆಯರನ್ನು ಜೀವಂತ ಶಾರದೆಯರೆಂದು ಪೂಜಿಸಿ ಅವರಿಗೆ ಮೂವರು ಸ್ವಾಮೀಜಿಗಳು ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ (ಪ್ರ.ವಾ., ಜ. 6). ಚಿತ್ರದಲ್ಲಿನ ಈ ದೃಶ್ಯವನ್ನು ನೋಡಿ ಹೃದಯ ತುಂಬಿಬಂತು. ಕೊರೊನಾ ವಿರುದ್ಧ ಹೋರಾಡಿದವರಲ್ಲೇ ಶಾರದಾ ಮಾತೆಯನ್ನು ಕಂಡ ಸ್ವಾಮೀಜಿಗಳು ಅಭಿನಂದನಾರ್ಹರು. ಸೇವೆಯೇ ದೈವ, ಸೇವಕನೇ ದೇವರು ಎಂಬ ಸಿರಿ ಪರಿಕಲ್ಪನೆಯ ಸಾಕಾರಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೇ?
–ಬಿಂಡಿಗನವಿಲೆ ಭಗವಾನ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.