ADVERTISEMENT

ಸಮಯಾವಕಾಶ ಬೇಕು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST

ಕೊರೊನಾ-2 ವೈರಸ್‌ನಿಂದ ಭಯಭೀತರಾಗಿ ವಿಶ್ವದಾದ್ಯಂತ ಜನರು ತಮ್ಮ ಓಡಾಟದ ಮೇಲೆ ನಿರ್ಬಂಧ ಹೇರಿಕೊಂಡಿದ್ದಾರೆ.

ಭಾರತದ ಪ್ರವಾಸೋ ದ್ಯಮ, ಹೋಟೆಲ್, ಮಾಲ್‌ಗಳು, ಚಿತ್ರಮಂದಿರಗಳು, ಸಾರಿಗೆ ಸಂಪರ್ಕ, ಬೀದಿ ಬದಿ ವ್ಯಾಪಾರ, ಕುಕ್ಕುಟೋದ್ಯಮ ಸೇರಿದಂತೆ ಎಲ್ಲ ರೀತಿಯ ವ್ಯಾಪಾರ ವಹಿವಾಟು ಕನಿಷ್ಠ ಮಟ್ಟಕ್ಕೆ ಬಂದು ನಿಂತಿದೆ.

ಆದ್ದರಿಂದ ಕೇಂದ್ರ ಸರ್ಕಾರವು ವ್ಯಾಪಾರಿಗಳಿಂದ ಈ ಮಾರ್ಚ್‌ ತಿಂಗಳು ಸಂಗ್ರಹಿಸಬೇಕಿರುವ ಮುಂಗಡ ತೆರಿಗೆ ಮತ್ತು ಜಿ.ಎಸ್‌.ಟಿ ಕಟ್ಟಲು ಸ್ವಲ್ಪ ಸಮಯಾವಕಾಶ ನೀಡಬೇಕು. ಇದರಿಂದ ವ್ಯಾಪಾರಿಗಳು ಒಂದಿಷ್ಟು ನಿಟ್ಟುಸಿರು ಬಿಡುವಂತೆ ಆಗುತ್ತದೆ.

ADVERTISEMENT

-ವಿ.ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.