ADVERTISEMENT

ದಾಸೋಹದ ವ್ಯವಸ್ಥೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:00 IST
Last Updated 29 ಮಾರ್ಚ್ 2020, 20:00 IST

ಕೆಲವು ಮಠ ಮಂದಿರಗಳಲ್ಲಿ ಭಕ್ತಾದಿಗಳಿಗೆ ನಿತ್ಯ ದಾಸೋಹ ನಡೆಯುತ್ತಿತ್ತು. ಆದರೆ ಈಗ ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯೊಳಗೆ ಉಳಿದಿರುವುದರಿಂದ, ಇಲ್ಲಿಗೆ ಭೇಟಿ ನೀಡುವವರು ಇಲ್ಲವಾಗಿದೆ. ಆದರೆ ದೇಶದ ಪ್ರಜೆಗಳ ರಕ್ಷಣೆಗಾಗಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ವೈದ್ಯರು, ದಾದಿಯರು, ಪೊಲೀಸರು, ಪಂಚಾಯಿತಿ ಅಧಿಕಾರಿಗಳು, ಮಾಧ್ಯಮದವರು ಹಸಿವನ್ನು ಸಹಿಸಿಕೊಂಡು, ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.

ಮಠ ಮಂದಿರಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹವರಿಗೆ ಪ್ರಸಾದದ ವ್ಯವಸ್ಥೆ ಮಾಡಬೇಕು ಅಥವಾ ಅವರ ಕರ್ತವ್ಯನಿರತ ಸ್ಥಳಕ್ಕೆ ತೆರಳಿ, ಊಟದ ವ್ಯವಸ್ಥೆ ಮಾಡಬೇಕು.

-ನಾಗೇಶ ಶಂ. ತೋಟದ ಕೋಲ್ಹಾರ, ಬಸವನ ಬಾಗೇವಾಡಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT