ADVERTISEMENT

ಲಂಚಕ್ಕೆ ದಾಖಲೆ ಒದಗಿಸಲಾದೀತೆ?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 18:14 IST
Last Updated 2 ಅಕ್ಟೋಬರ್ 2022, 18:14 IST
   

ರಾಜ್ಯ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಅವರು ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ, ಶೇಕಡ 40ರ ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ. ಯಾರಾದರೂ ಲಂಚಕ್ಕೆ ದಾಖಲೆ ಒದಗಿಸಲು, ಸಾಕ್ಷ್ಯ ನೀಡಲು ಸಾಧ್ಯವೇ? ಬೊಫೋರ್ಸ್‌ ಹಗರಣದಲ್ಲಿ ಲಂಚ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಮೂರು ದಶಕಗಳು ಕಳೆದರೂ ಲಂಚ ಪಡೆದಿರುವುದು ಸಾಬೀತಾಗಿಲ್ಲ. ಬಹುಪಾಲು ರಾಜಕಾರಣಿಗಳು ಲಂಚಕೋರರೇ ಎಂಬುದು ಪ್ರಜೆಗಳಿಗೆ ತಿಳಿದಿದೆ. ಇದಕ್ಕೆ ಪಕ್ಷಭೇದ ಇಲ್ಲ ಎಂಬುದೂ ಗೊತ್ತಿರುವ ಸಂಗತಿ. ಆದರೂ ಜನ ಅಸಹಾಯಕರಾಗಿದ್ದಾರೆ.

-ಡಾ. ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT