ADVERTISEMENT

ಕೊನೇ ಗಳಿಗೆಯಲ್ಲಿ ಪಟಾಕಿ ನಿಷೇಧ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 19:30 IST
Last Updated 8 ನವೆಂಬರ್ 2020, 19:30 IST

ಕೊರೊನಾದ ಈ ಪರಿಸ್ಥಿತಿಯಲ್ಲಿ ಪಟಾಕಿ ನಿಷೇಧಿಸಬೇಕಾದದ್ದು ಹೌದಾದರೂ ದೀಪಾವಳಿ ತೀರಾ ಸಮೀಪಕ್ಕೆ ಬಂದಾಗ ಇಂತಹ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಪಟಾಕಿ ತಯಾರಕರು ತಮ್ಮ ಬಂಡವಾಳವನ್ನೆಲ್ಲ ಸುರಿದು ಹಬ್ಬಕ್ಕೆಂದು ಉತ್ಪಾದಿಸಿದ ಪಟಾಕಿಗೆ ಮಾರುಕಟ್ಟೆ ರೂಪಿಸದಿದ್ದರೆ ಅವರ ಗತಿಯೇನು? ನಿಷೇಧ ಮಾಡಬೇಕಿದ್ದರೆ ಒಂದೆರಡು ತಿಂಗಳು ಮುಂಚಿತವಾಗಿಯೇ ಮಾಡಬೇಕಿತ್ತು. ಒಮ್ಮಿಂದೊಮ್ಮೆಲೇ ನಿಷೇಧಿಸಿದರೆ ಪಟಾಕಿ ತಯಾರಕರು, ವ್ಯಾಪಾರಸ್ಥರು ಬೀದಿಗೆ ಬರುತ್ತಾರೆ. ಅದನ್ನು ಸರಿದೂಗಿಸುವ ವ್ಯವಸ್ಥೆ ಅಥವಾ ಪ್ಯಾಕೇಜ್ ಅನ್ನು ಸರ್ಕಾರ ಘೋಷಣೆ ಮಾಡುವುದೇ?

-ಗಂಗಾಧರ ಅಂಕೋಲೇಕರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT