ADVERTISEMENT

ವಾಚಕರವಾಣಿ | ಜನಪ್ರಿಯ ಧಾರಾವಾಹಿಗಳಲ್ಲಿ ಪಾತ್ರಧಾರಿಗಳ ಉಡುಪು ಬಿಂಬಿಸುವುದೇನು?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಜೂನ್ 2020, 2:03 IST
Last Updated 26 ಜೂನ್ 2020, 2:03 IST
ಜೊತೆಜೊತೆಯಲಿ ಧಾರಾವಾಹಿಯ ಅನು ಪಾತ್ರಧಾರಿ ಮೇಘನಾ ಶೆಟ್ಟಿ ಮತ್ತು ಮೀರಾ ಪಾತ್ರಧಾರಿ ಮಾನಸಾ.
ಜೊತೆಜೊತೆಯಲಿ ಧಾರಾವಾಹಿಯ ಅನು ಪಾತ್ರಧಾರಿ ಮೇಘನಾ ಶೆಟ್ಟಿ ಮತ್ತು ಮೀರಾ ಪಾತ್ರಧಾರಿ ಮಾನಸಾ.   

ಧರಿಸುವ ಉಡುಪು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಒಬ್ಬ ರೈತ ಮಹಿಳೆ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಕ್ಕೆ ಕೆಲ ದಿನಗಳ ಹಿಂದೆ ಕೆಲವರಿಂದ ಟೀಕೆಗಳು ವ್ಯಕ್ತವಾದವು. ಆಹಾರ ಪದ್ಧತಿ, ಉಡುಪು ಅವರವರ ವೈಯಕ್ತಿಕ ವಿಚಾರವೇ ಆಗಿರುತ್ತದೆ.

ಆದರೆ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳಲ್ಲಿ ಖಳನಾಯಕಿ ಪಾತ್ರಧಾರಿಗಳು ಯಾವಾಗಲೂ ಮಿಡಿ, ತೋಳುರಹಿತ ಉಡುಪುಗಳನ್ನೇ ಧರಿಸಿರುತ್ತಾರೆ. ನಾಯಕಿ ಪಾತ್ರಧಾರಿಗಳು ಮಾತ್ರ ಲಂಗ– ದಾವಣಿ, ಸೀರೆ ಉಟ್ಟಿರುತ್ತಾರೆ. ಇದನ್ನು ಧಾರಾವಾಹಿಗಳ ನಿರ್ದೇಶಕರು ಯಾವ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ?

-ಪ್ರತಿಭಾ ಟಿ.ಎಸ್‌., ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.