ADVERTISEMENT

ನೇರ ಸಾಲ: ರಾಜಕೀಯ ನುಸುಳದಿರಲಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 18:45 IST
Last Updated 26 ಜೂನ್ 2020, 18:45 IST

ಲಾಕ್‌ಡೌನ್‌ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ರಾಜ್ಯ ಸರ್ಕಾರವು ಸ್ವಂತ ಉದ್ಯೋಗ ಆರಂಭಿಸಲು ನೇರ ಸಾಲ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಇದು ಅತಿ ಹೆಚ್ಚು ಬಡತನ ಇರುವ ಸಮುದಾಯದ ಆರ್ಥಿಕತೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಆದರೆ ಈ ಯೋಜನೆಯ ಜಾರಿಯಲ್ಲಿ ಲೋಪಗಳು ನುಸುಳಲು ಅವಕಾಶ ಕೊಡಬಾರದು. ಫಲಾನುಭವಿಗಳಿಗೆ ತ್ವರಿತವಾಗಿ ಹಣ ತಲುಪಿಸಲು ಕ್ರಮ ಕೈಗೊಳ್ಳಬೇಕು.

ಹಿಂದೆ ಕೆಲವು ಜನಕಲ್ಯಾಣ ಯೋಜನೆಗಳ ಜಾರಿ ಸಂದರ್ಭದಲ್ಲಿ ಪಕ್ಷ ರಾಜಕೀಯ ನುಸುಳಿದ ಆರೋಪಗಳು ಕೇಳಿಬಂದಿದ್ದವು. ಮತ ಹಾಕಿದವರನ್ನು ಗುರುತಿಸಿ, ಅವರಿಗೆ ಮಣೆ ಹಾಕಿದ ನಿದರ್ಶನಗಳು ಇವೆ. ಫಲಾನುಭವಿಗಳ ಆಯ್ಕೆಯಲ್ಲಿ ಇಂತಹವುಗಳಿಗೆ ಆಸ್ಪದವಾಗದಂತೆ ನೋಡಿಕೊಳ್ಳಬೇಕು. ಅರ್ಹರನ್ನಷ್ಟೇ ಗುರುತಿಸಬೇಕು.

-ಬಿ.ಆರ್.ಸಂತೋಷ ಜಾಬೀನ್, ಸುಲೇಪೇಟ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.