ADVERTISEMENT

ತೆರಿಗೆ ಹಣವನ್ನು ಬೇಕಾಬಿಟ್ಟಿ ಚೆಲ್ಲದಿರಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:15 IST
Last Updated 17 ಡಿಸೆಂಬರ್ 2018, 20:15 IST

ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿ ವ್ಯಯಿಸುವುದು ಸರ್ಕಾರಗಳಿಗೆ ಚಾಳಿ ಆಗಿಬಿಟ್ಟಿದೆ. ಬೆಂಗಳೂರಿನಲ್ಲಿ ನಡೆಸುತ್ತಿರುವ ವೈಟ್‌ ಟಾಪಿಂಗ್‌ (ಪ್ರ.ವಾ., ಒಳನೋಟ, ಡಿ. 17) ಕೆಲಸ ಕೂಡ ಇದರಲ್ಲಿ ಒಂದು. ಸರ್ಕಾರವು ಯಾರ ಅನುಕೂಲಕ್ಕಾಗಿ ಇಷ್ಟು ವೆಚ್ಚದ ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲು ಹೊರಟಿದೆ? ರಸ್ತೆಗಳಲ್ಲಿನ ಗುಂಡಿ ಮುಚ್ಚುವಂತೆ ಹೈಕೋರ್ಟ್‌ ಗದರಿಸಬೇಕಿದೆ. ಆದರೂ ಆ ಕೆಲಸವನ್ನು ಇನ್ನೂ ಪೂರ್ಣಗೊಳಿಸಿಲ್ಲ. ಇಲ್ಲಿ ನೋಡಿದರೆ, ಹೊಸದಾಗಿ ಟಾರು ಕಂಡಿದ್ದ ರಸ್ತೆಗಳ ಮೇಲೆಯೇ ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ಅದಾದರೂ ತ್ವರಿತವಾಗಿ ಮಾಡಿ ಮುಗಿಸುತ್ತಾರೆಯೇ ಎಂದರೆ ಅದೂ ಇಲ್ಲ. ನಿಧಾನಗತಿಯ ಕಾಮಗಾರಿಯಿಂದಾಗಿ ಪ್ರಯಾಣಿಕರ ಬವಣೆ ಹೇಳತೀರದಾಗಿದೆ.

ಅಭಿವೃದ್ಧಿ ಯೋಜನೆಗಳಿಗೆ ಕಮಿಷನ್ ಎಂಬ ಭೂತ ಕಾಡಲಾರಂಭಿಸಿದೆ. ಮೊದಲು ನುಂಗಣ್ಣರ ಜೇಬು ತುಂಬಿಸಬೇಕು. ಉಳಿದ ಹಣದಲ್ಲಿ ಕಾಮಗಾರಿ ನಡೆಸಬೇಕು. ಹೀಗಾದರೆ ಗುಣಮಟ್ಟ ಕಾಯ್ದುಕೊಳ್ಳುವುದಾದರೂ ಹೇಗೆ?

ಕೆ.ಸಿ. ರತ್ನಶ್ರೀ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.