ADVERTISEMENT

ಸಾವಿನ ಮನೆಯಲ್ಲಿ ರಾಜಕಾರಣ ಸಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 1 ಅಕ್ಟೋಬರ್ 2020, 20:30 IST
Last Updated 1 ಅಕ್ಟೋಬರ್ 2020, 20:30 IST

ಕೋವಿಡ್‌ನಿಂದ ಇತ್ತೀಚೆಗೆ ಮೃತಪಟ್ಟ, ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ನಂತರ ಅವರ ಉತ್ತರಾಧಿಕಾರಿ ಯಾರು? ಪತ್ನಿ ಅಥವಾ ಹೊಸ ಮುಖಗಳಿಗೆ ಅವಕಾಶ ಸಿಗಬಹುದೇ ಎಂಬಂಥ ಸುದ್ದಿಗಳನ್ನು ಕೆಲ ಮಾಧ್ಯಮಗಳು ಪ್ರಕಟಿಸುತ್ತಿವೆ. ಆದರೆ ಇದು ಅಂಗಡಿಯವರ ಆಪ್ತ ವಲಯಕ್ಕೆ ನೋವು, ಜುಗುಪ್ಸೆ ತರುವಂತಹದ್ದು. ಅಂಗಡಿ ಅವರ ಅಕಾಲಿಕ ಅಗಲಿಕೆಯ ನೋವಿನಿಂದ ಅವರೆಲ್ಲ ಇನ್ನೂ ಹೊರಬಂದಿರಲು ಸಾಧ್ಯವಿಲ್ಲ. ಹೀಗಿರುವಾಗ ಇಂತಹ ಚರ್ಚೆಗಳಿಂದ ಆ ನೋವಿನ ಮೇಲೆ ಮತ್ತೊಂದು ಬರೆ ಎಳೆದಂತೆ ಆಗುತ್ತದೆ. ಸಾವಿನ ಮನೆಯಲ್ಲಿ ರಾಜಕಾರಣ ಮಾಡುವುದಕ್ಕಿಂತ ಈ ವಿಷಯದ ಚರ್ಚೆಯನ್ನು ಮುಂದೂಡುವುದು ಸೂಕ್ತ.

ಬಸವಪ್ರಸಾದ ಸಂಕಪಾಳ, ನೇರ್ಲಿ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT