ADVERTISEMENT

ಸಂಚಾರ ಪೊಲೀಸರು ಭಯ ಹುಟ್ಟಿಸದಿರಿ: ಸುಧಾರಣೆ ತನ್ನಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:00 IST
Last Updated 4 ಅಕ್ಟೋಬರ್ 2019, 20:00 IST

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣಕ್ಕೆ ಸಮೀಪ ಟಂಟಂ ವಾಹನವು, ತಪಾಸಣೆ ನಡೆಸುತ್ತಿದ್ದ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಸ್‌ಗೆ ಡಿಕ್ಕಿ ಹೊಡೆದು, ಟಂಟಂನಲ್ಲಿದ್ದ ಮೂವರು ಸ್ಥಳದಲ್ಲೇ ಪ್ರಾಣ ತೆತ್ತಿರುವುದು ದುರದೃಷ್ಟಕರ. ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಮೂಲಕ, ವ್ಯವಸ್ಥೆಯಲ್ಲಿ ಸುಧಾರಣೆ ತರುವ ಬದಲಾಗಿ ಭಯದ ವಾತಾವರಣ ಮೂಡಿಸಿದೆ. ಈ ಭಯವೇ ಇಂತಹ ಅಪಘಾತಗಳಿಗೆ ಕಾರಣ. ಪೊಲೀಸರಿಗೆ ಸಾರ್ವಜನಿಕರ ಮೇಲೆ ನಿಜವಾದ ಕಾಳಜಿ ಇದ್ದಲ್ಲಿ ಚಾಲಕರನ್ನು ತಿದ್ದಿ, ಅವಕಾಶ ಕೊಟ್ಟು ನಂತರ ಶಿಕ್ಷಿಸಲಿ. ಬದಲಿಗೆ, ರಸ್ತೆ ಮಧ್ಯದಲ್ಲಿ ನುಗ್ಗಿ, ವಾಹನಗಳನ್ನು ಅಟ್ಟಾಡಿಸಿ ಹಿಡಿಯುವುದು ಅವರಿಗೂ ಕ್ಷೇಮವಲ್ಲ, ಚಾಲಕರಿಗೂ ಕ್ಷೇಮವಲ್ಲ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಒಳಿತಲ್ಲ. ಪೊಲೀಸರು ವಾಹನದ ಸಂಖ್ಯೆಯನ್ನು ನಮೂದಿಸಿಕೊಂಡರೆ ಸಾಕು, ಬಳಿಕ ದಂಡ ವಿಧಿಸಬಹುದು. ಎಲ್ಲರಿಗೂ ಅವಲಂಬಿತರು ಇರುತ್ತಾರೆ ಎಂಬುದು ಅವರ ಗಮನದಲ್ಲಿ ಇರಬೇಕು.

-ಕೌಡ್ಲೆರವಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT