ADVERTISEMENT

ಅನುದಾನ ಬಳಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST

ರಾಜ್ಯದ ಪರಿಸರ ಪ್ರವಾಸೋದ್ಯಮಕ್ಕೆ ಹಂಚಿಕೆಯಾದ ಅನುದಾನದಲ್ಲಿ ₹ 11.90 ಕೋಟಿ ಸದ್ಬಳಕೆಯಾಗದೆ ಹಾಗೇ ಉಳಿದುಕೊಂಡಿರುವುದು ದುರ್ದೈವವೇ ಸರಿ. ಇದರಲ್ಲಿ ಸಂಬಂಧಪಟ್ಟವರ ಪೂರ್ವ ತಯಾರಿಯ ಕೊರತೆ ಎದ್ದು ಕಾಣುತ್ತದೆ. ಸಂಬಂಧಿಸಿದವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ.

ಪ್ರವಾಸಿ ತಾಣಕ್ಕೆ ತಕ್ಕಂತೆ ಸರಿಯಾದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ, ಅನುದಾನವನ್ನು ಪಾರದರ್ಶಕವಾಗಿ ಸದ್ಬಳಕೆ ಮಾಡಿ, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿದರೆ ದೇಶವೇ ನಮ್ಮತ್ತ ತಿರುಗಿ ನೋಡುವುದರಲ್ಲಿ ಸಂಶಯವಿಲ್ಲ. ಈ ಕಾರ್ಯಕ್ಕೆ ಇಚ್ಛಾಶಕ್ತಿ ಬೇಕಷ್ಟೆ.

-ಕುಮಾರ್ ಹೆಬ್ಬಾಲೆ,ಮದ್ದೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.