ಶಿಕ್ಷಕರಿಗೆ ಜ್ಞಾನದ ಹಸಿವು ಇರಬೇಕು ಎಂಬ ಡಾ. ಜ್ಯೋತಿ ಅವರ ಲೇಖನ (ಸಂಗತ, ಅ. 6) ಸಮಾಜದ ಮುಖ್ಯ ಆಧಾರಸ್ತಂಭದಂತಿರುವ ಶಿಕ್ಷಕ ಸಮೂಹ ಮತ್ತೆ ಮತ್ತೆ ಪುನರಾವಲೋಕನ ಮಾಡಿಕೊಳ್ಳಲು ಬೆಳಕಿಂಡಿಯಂತೆ ಇದೆ. ಮಾನವ ಜನಾಂಗದ ಉದ್ಧಾರಕ್ಕೆ ಶಿಕ್ಷಣವೇ ಭದ್ರ ಬುನಾದಿ. ಈ ಬುನಾದಿ ಗಟ್ಟಿಯಾಗಿ ನಿರ್ಮಾಣವಾಗಬೇಕಾದರೆ ಉತ್ತಮ ವ್ಯಕ್ತಿತ್ವದಿಂದ ಕೂಡಿದ ಜ್ಞಾನವಂತ ಶಿಕ್ಷಕ ಸಮೂಹವು ಸಮರ್ಪಣಾ ಮನೋಭಾವದಿಂದ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಪರಂಪರೆಯಿಂದ ಆಚಾರ್ಯ, ಗುರು ಎಂಬ ಅಭಿದಾನ ಹೊಂದಿರುವ ಇಂದಿನ ಶಿಕ್ಷಕ, ಅಧ್ಯಾಪಕ ಅಥವಾ ಪ್ರಾಧ್ಯಾಪಕರು ಪೂರ್ವಸಿದ್ಧತೆಯೊಂದಿಗೆ, ನಿರಂತರ ಅಧ್ಯಯನದೊಂದಿಗೆ ಜ್ಞಾನವನ್ನು ವೃದ್ಧಿಸಿಕೊಂಡು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಬೋಧನೆಯನ್ನು ಮಾಡಬೇಕು. ಆಗ ನಿಜಕ್ಕೂ ಉತ್ತಮ ಭವಿಷ್ಯ ನಿರೀಕ್ಷಿಸಬಹುದು.
- ಸಂಜೀವಕುಮಾರ ಅತಿವಾಳೆ,ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.