ADVERTISEMENT

‘ಇಲಿ’ ಹಿಡಿಯುವವರು...

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:15 IST
Last Updated 3 ಮೇ 2019, 20:15 IST

‘ನೀತಿ ಸಂಹಿತೆ: ವ್ಯರ್ಥ ಕಸರತ್ತು?’ ಎಂಬಎಚ್.ಕೆ.ಶರತ್ ಅವರ ಲೇಖನ (ಸಂಗತ, ಏ. 30) ಇಂದಿನ ಪ್ರಭುತ್ವದ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಹುಲಿಯನ್ನು ಹಿಡಿಯುವ ಬದಲು ಇಲಿಯನ್ನು ಹಿಡಿಯುವುದರಲ್ಲೇ ನಮ್ಮ ಅಧಿಕಾರಿಗಳಿಗೆ ಆಸಕ್ತಿ.

ಸರ್ಕಾರದ ಕಪಿಮುಷ್ಟಿಯಲ್ಲಿ ಅಡಗಿರುವ ಇಲಾಖೆಗಳು, ರಾಜಕಾರಣಿಗಳ ಕೃಪಾಕಟಾಕ್ಷಕ್ಕೆ ಪಾತ್ರರಾದ ಭ್ರಷ್ಟ ಅಧಿಕಾರಿ ವರ್ಗದಿಂದ ಪ್ರಜೆಗಳು ನ್ಯಾಯಸಮ್ಮತ ಚುನಾವಣೆಯನ್ನು ನಿರೀಕ್ಷಿಸಲು ಸಾಧ್ಯವೇ? ಇವರ ದರ್ಪ ಏನಿದ್ದರೂ ಬಡ ಪ್ರಜೆಗಳ ಮೇಲೇ ಹೊರತು ರಾಜಕಾರಣಿಗಳ ಮೇಲಲ್ಲ. ಹಿಡಿಯಬೇಕಾದವರನ್ನು ಬಿಟ್ಟು, ಬಿಡಬೇಕಾದವರನ್ನು ತಡೆದು ನಿಲ್ಲಿಸುವ ಗೋಳಿನ ಕಸರತ್ತನ್ನು ಕೊನೆಗಾಣಿಸಬೇಕಾಗಿದೆ.

–ವೀಣಾ ಸುಬ್ರಹ್ಮಣ್ಯ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.