ADVERTISEMENT

ದುಬಾರಿ ಪ್ರವೇಶ ಶುಲ್ಕ

ಎಂ.ಮೃತ್ಯುಂಜಯಪ್ಪ
Published 27 ಸೆಪ್ಟೆಂಬರ್ 2018, 19:45 IST
Last Updated 27 ಸೆಪ್ಟೆಂಬರ್ 2018, 19:45 IST

ವಿಜಯನಗರಕ್ಕೆ (ಹಂಪಿ) ಹೋಗಿ ಬಂದಾಗ ಶುಲ್ಕ ಏರಿಕೆ ಬಗ್ಗೆ ತಿಳಿದುಬಂತು. ₹15 ಇದ್ದ ಪ್ರವೇಶ ಶುಲ್ಕ ₹40ಕ್ಕೆ ಏರಿದೆ. ವಿದೇಶಿಯರಿಗೆ ₹250 ಇದ್ದ ಶುಲ್ಕ₹600ಕ್ಕೆ ಹೋಗಿದೆ. ಈ ಏರಿಕೆ ಬಗ್ಗೆ ವಿಚಾರಿಸಿದರೆ ‘ಇದು ವಿಶ್ವ ಪರಂಪರೆಯ ತಾಣ’ ಎನ್ನುತ್ತಾರೆ. ಪ್ರವಾಸಿಗರಿಗೆ ಏನಾದರೂ ಅನುಕೂಲ ಕಲ್ಪಿಸಿದ್ದಾರೆಯೇ? ಇಲ್ಲ. ಅದೇ ಹಾಳುಬಿದ್ದ ರಸ್ತೆಗಳು, ದೀಪವಿಲ್ಲದ ಕಂಬಗಳು, ಕುಡಿಯಲು ನೀರು ಸಿಗುವುದಿಲ್ಲ. ನೋಟದಲ್ಲಾದರೂ ಏನಾದರೂ ಬದಲಾವಣೆ ಆಗಿದೆಯೇ? ಅದೇ ಪಾಳು ಬಿದ್ದ ದೇವಾಲಯಗಳು, ಅದೇ ಕಥೆ!

ದುಬಾರಿ ಶುಲ್ಕ ಕಾರಣಕ್ಕೆ ಕೆಲವು ಆಸಕ್ತರು ಹೊರ ಗಿನಿಂದಲೇ ನೋಡಿ ಹೋಗುತ್ತಿದ್ದಾರೆ. ಶುಲ್ಕ ವಸೂಲಿ ಹೊಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಅವರು ಮನಬಂದಂತೆ ವರ್ತಿಸುತ್ತಾರೆ. ಶುಲ್ಕ ಹೆಚ್ಚಳ ಮಾನದಂಡವಲ್ಲ, ‘ಸೌಲಭ್ಯ ಮಾನದಂಡ’ ಆಗಬೇಕು. ಸಂಬಂಧಿಸಿದವರು ಶುಲ್ಕ ಭಾರ ತಪ್ಪಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT