ADVERTISEMENT

ವಾಚಕರ ವಾಣಿ | ಮಾರ್ಗ ಇರುವೆಡೆ ರೋಪ್‌ವೇ ಏಕೆ?

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 19:31 IST
Last Updated 20 ಮಾರ್ಚ್ 2022, 19:31 IST

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸಿದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂಬುದು ರೋಪ್‌ವೇ ಪರ‌ ಇರುವವರ ವಾದ. ರೋಪ್‌ವೇ ಎಂಬುದು ರಸ್ತೆ ಸಂಪರ್ಕ ಸಾಧ್ಯವಾಗದ ಬೆಟ್ಟ ಗುಡ್ಡಗಳಿಗೆ ಸಂಪರ್ಕ ಸಾಧಿಸಲು ಅನ್ವೇಷಣೆಗೊಂಡ ಮಾರ್ಗ. ಆದರೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಈಗಾಗಲೇ ಕಾಲುದಾರಿ‌ ಮತ್ತು ವಾಹನದ ಮೂಲಕ ತಲುಪಲು ರಸ್ತೆಗಳು ಇರುವ ಕಾರಣ ಈ ರೋಪ್‌ವೇ ಸಂಪೂರ್ಣ ಮೂರ್ಖತನದ ಯೋಜನೆ ಎನಿಸುತ್ತದೆ.

ಕೆಲವೇ ಜನರ ಲಾಭಕ್ಕಾಗಿ ಪ್ರಕೃತಿಯನ್ನು ನಾಶ ಮಾಡಿದರೆ, ಕೇರಳ, ಕೊಡಗಿನಲ್ಲಿ ಆದಂತೆ ಕುಸಿತ ಸಂಭವಿಸಿದರೆ ಅದನ್ನು ಸರಿಪಡಿಸಲು ಸಾಧ್ಯವೇ? ಈಗಾಗಲೇ ಬೆಟ್ಟದಲ್ಲಿ ಕುಸಿತ ಉಂಟಾಗಿದೆ. ರೋಪ್‌ವೇ ಹೆಸರಿನಲ್ಲಿ ನಡೆಸುವ ಯಾವುದೇ ಕಾಮಗಾರಿಯು ಬೆಟ್ಟದ ಪ್ರಕೃತಿಗೆ ಉರುಳಾಗಿ ಪರಿಣಮಿಸುತ್ತದೆ. ಹಾಗಾಗಿ ಈ ಯೋಜನೆಯನ್ನು ನಿಲ್ಲಿಸಬೇಕು.

-ಎಸ್.ರವಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT