ADVERTISEMENT

ಕರ್ನಾಟಕದಲ್ಲಿ ಪರಿವಾರ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 15:17 IST
Last Updated 20 ಸೆಪ್ಟೆಂಬರ್ 2022, 15:17 IST

ಪರಿವಾರ ರಾಜಕಾರಣ ಕುರಿತಂತೆ ನೆಹರೂ– ಗಾಂಧಿ ಕುಟುಂಬವನ್ನು ಇನ್ನಿಲ್ಲದಂತೆ ರಾಜ್ಯದಲ್ಲಿ ಟೀಕಿಸಲಾಗುತ್ತಿದೆ. ಹೀಗೆ ನೆಹರೂ– ಗಾಂಧಿ ಕುಟುಂಬದ ರಾಜಕಾರಣವನ್ನು ಟೀಕಿಸುವ ಬಿಜೆಪಿ ಮಂದಿಗೆ ತಮ್ಮ ಮನೆಯೊಳಗಣ ಕುಟುಂಬ ರಾಜಕಾರಣ ಕಾಣುವುದಿಲ್ಲ, ಏಕೆ? ಬಿಡಿಎ ವಸತಿ ಯೋಜನೆಗೆ ಸಂಬಂಧಿಸಿದಂತೆ ಮುಖಂಡ ಬಿ.ಎಸ್.ಯಡಿಯೂರಪ್ಪ, ಮಗ ವಿಜಯೇಂದ್ರ, ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಅವರ ಮಗ ಶಶಿಧರ ಮರಡಿ, ವಿರೂಪಾಕ್ಷಪ್ಪ ಅವರ ಅಳಿಯ ಸಂಜಯ್ ಹಾಗೂ ಇತರರ ಮೇಲೆ ಎಫ್‍ಐಆರ್ ದಾಖಲಾಗಿದೆ. ಇವರೆಲ್ಲ ಈಗ ಆರೋಪಿಗಳು.

ಈ ಆರೋಪ ಸಿದ್ಧವಾಗುತ್ತದೋ ಇಲ್ಲವೋ ಎಂಬುದು ಬೇರೆ ಸಂಗತಿ. ಆದರೆ ಕುಟುಂಬದ ತಂದೆ, ಮಗ, ಅಳಿಯ, ಮೊಮ್ಮಗ ಹೀಗೆ ಎಲ್ಲರೂ ಆರೋಪಿಗಳಾಗಿದ್ದಾರೆ. ಇದು ಕುಟುಂಬ, ಪರಿವಾರ ರಾಜಕಾರಣವಲ್ಲವೆ? ಇದರ ಬಗ್ಗೆ ಏಕೆ ಬಿಜೆಪಿ ಮಾತನಾಡುವುದಿಲ್ಲ? ಭ್ರಷ್ಟಾಚಾರದ ಆರೋಪ ಬಂದ ತಕ್ಷಣ ವಿರೋಧ ಪಕ್ಷದವರ ಮೇಲೆ ಐ.ಟಿ, ಇ.ಡಿ ದಾಳಿ ನಡೆಯುತ್ತದೆ. ಈ ಪ್ರಕರಣದಲ್ಲಿ ಅಂತಹ ಕ್ರಮ ಏಕಿಲ್ಲ? ಕುಟುಂಬ ರಾಜಕಾರಣದ ಪರಮೋಚ್ಚ ನಿದರ್ಶನವೆಂದರೆ ಯಡಿಯೂರಪ್ಪ ಕುಟುಂಬದ ರಾಜಕಾರಣವಾಗಿದೆ.

–ಟಿ.ಆರ್. ಚಂದ್ರಶೇಖರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.