ADVERTISEMENT

ಆರ್ಥಿಕ ಹೊರೆ ಇಳಿಸಿದ ನಡೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 16:58 IST
Last Updated 6 ಸೆಪ್ಟೆಂಬರ್ 2020, 16:58 IST

ರಾಜ್ಯದ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಈ ವರ್ಷದಿಂದಲೇ ಪ್ರಾರಂಭಿಸಲು ರಾಜ್ಯ ಸಚಿವ ಸಂಪುಟ ಸಮ್ಮತಿಸಿರುವುದು ಮಹತ್ವಪೂಣ೯ ನಿರ್ಧಾರ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಮೊದಲ ಹಂತದಲ್ಲಿಯೇ ಇಂತಹ ಕ್ರಮ ಕೈಗೊಂಡಿರುವುದು ಉಚಿತವಾದ ನಡೆ.

ಮಕ್ಕಳನ್ನು ಒಂದನೇ ತರಗತಿಗೆ ಪಬ್ಲಿಕ್‌ ಶಾಲೆಗಳಿಗೆ ಸೇರಿಸುವ ಮುನ್ನ ಎಲ್‌ಕೆಜಿ ಮತ್ತು ಯುಕೆಜಿಗಾಗಿ ಅವರನ್ನು ಖಾಸಗಿ ಶಾಲೆಗಳಲ್ಲೇ ಸೇರಿಸಬೇಕಾಗಿತ್ತು. ಇದೀಗ ಸಕಾ೯ರಿ ಶಾಲೆಗಳಲ್ಲಿಯೂ ಈ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿರುವುದರಿಂದ ಪೋಷಕರ ಆರ್ಥಿಕ ಹೊರೆ ಇಳಿಸಿದಂತಾಗಿದೆ. ಇಲ್ಲದಿದ್ದರೆ ಅವರು ಖಾಸಗಿ ಶಾಲೆಗಳಲ್ಲಿ ಅದಕ್ಕಾಗಿ ದುಬಾರಿ ವೆಚ್ಚ ಭರಿಸಬೇಕಾಗಿತ್ತು.

ರಾಜ್ಯದ ಸಕಾ೯ರಿ ಪ್ರಥಮ ದಜೆ೯ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ₹ 35 ಕೋಟಿ ಮೊತ್ತದ ಯೋಜನೆ ರೂಪಿಸಿರುವುದು ಸಹ ಶ್ಲಾಘನೀಯ ಸಂಗತಿ. ಒಟ್ಟಾರೆ ರಾಜ್ಯ ಸಚಿವ ಸಂಪುಟವು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿರುವುದು ಸ್ವಾಗತಾಹ೯ ಸಂಗತಿ.

ADVERTISEMENT

-ಎ.ಜಿ.ಸುರೇಂದ್ರಬಾಬು,ಹೊಳಲ್ಕೆರೆ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.