ADVERTISEMENT

ಅರಣ್ಯ ಇಲಾಖೆ ಏನು ಮಾಡುತ್ತಿದೆ?

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 1:23 IST
Last Updated 23 ಅಕ್ಟೋಬರ್ 2019, 1:23 IST

ಕಾಡು ಮೊಲಗಳನ್ನು ನಿರ್ದಯವಾಗಿ ಬೇಟೆಯಾಡುವ, ನವಿಲುಗಳನ್ನು ಹಿಡಿದು ಅದರ ಪುಕ್ಕ ಕಿತ್ತು ಕ್ರೌರ್ಯ ಮೆರೆಯುವ, ಹಾವುಗಳಿಗೆ ಬೆಂಕಿ ಹಚ್ಚುವಂತಹ ಅನೇಕ ಪೈಶಾಚಿಕ ಕೃತ್ಯಗಳು ಟಿಕ್ ಟಾಕ್, ಮ್ಯೂಸಿಕಲಿ ಮುಂತಾದ ಆ್ಯಪ್‌ಗಳಲ್ಲಿ ದಿನನಿತ್ಯ ಹರಿದಾಡುತ್ತಿವೆ. ವನ್ಯಜೀವಿಗಳನ್ನು ಅತ್ಯಂತ ಕ್ರೂರವಾಗಿ ಹೀಗೆ ಬಹಿರಂಗವಾಗಿ ಬೇಟೆಯಾಡುವವರನ್ನು ಅರಣ್ಯ ಇಲಾಖೆ ಬಂಧಿಸಬಹುದಲ್ಲವೇ? ಪ್ರಾಣಿ ದಯಾ ಸಂಘಗಳು ನಿಷ್ಕ್ರಿಯಗೊಂಡಿವೆಯೇ?

ಅರಣ್ಯ ಇಲಾಖೆಯ ಈ ಮೌನ ಅತ್ಯಂತ ಅಪಾಯಕಾರಿ. ಇದು ಸಾರ್ವಜನಿಕರಲ್ಲಿ ಬಿತ್ತುವ ಸಂದೇಶವೇನು? ಇಂಥ ಪೈಶಾಚಿಕ ಕೃತ್ಯಗಳನ್ನು ತಡೆಯದಿದ್ದರೆ ಒಂದೆಡೆ ವನ್ಯಜೀವಿಗಳು ಅವಸಾನದತ್ತ ಸಾಗುತ್ತವೆ. ಇನ್ನೊಂದೆಡೆ, ಈ ಕ್ರೌರ್ಯವನ್ನೇ ಯುವಪೀಳಿಗೆಯು ಮನರಂಜನೆ, ಸಾಹಸವೆಂದು ಆಸ್ವಾದಿಸುವ ಅಪಾಯವಿರುತ್ತದೆ. ಅರಣ್ಯ ಇಲಾಖೆ ಕೂಡಲೇ ಕಾರ್ಯೋನ್ಮುಖವಾಗಬೇಕು.

– ಮಹೇಶ್ವರ ಹುರುಕಡ್ಲಿ,ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.