ADVERTISEMENT

ತಾರತಮ್ಯ ಧೋರಣೆ ಕೈಬಿಡಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 19:31 IST
Last Updated 7 ಏಪ್ರಿಲ್ 2021, 19:31 IST

‘ಹೆಚ್ಚಿನ ದೈಹಿಕ ಶ್ರಮ ವಹಿಸಿ ಕೆಲಸ ಮಾಡುವ ಪುರುಷರಿಗೆ ಹೆಚ್ಚು ಕೂಲಿ ನೀಡಿಕೆ ಸಮಂಜಸ’ ಎಂದು ಜಿ.ಎಚ್.ವೆಂಕಟೇಶ ಮೂರ್ತಿ ಅವರು ಹೇಳಿರುವುದನ್ನು (ವಾ.ವಾ., ಏ. 6) ಒಪ್ಪಲಾಗದು. ನಿಸರ್ಗದತ್ತವಾಗಿ ಪುರುಷ ಹಾಗೂ ಸ್ತ್ರೀಯರ ದೇಹ ರಚನೆ ಹಾಗೂ ಶಕ್ತಿ, ಸಾಮರ್ಥ್ಯಗಳಲ್ಲಿ ವ್ಯತ್ಯಾಸಗಳಿವೆ. ಆದರೆ ಅದರ ಆಧಾರದ ಮೇಲೆ ಕೂಲಿ, ವೇತನ ನೀಡಿಕೆಯಲ್ಲಿ ವ್ಯತ್ಯಾಸ ಮಾಡಲಾಗದು. ಕೆಲವು ಸನ್ನಿವೇಶಗಳಲ್ಲಿ ಮಹಿಳೆಯರು ಪುರುಷರಿಗಿಂತಲೂ ಹೆಚ್ಚಿನ ತಾಳ್ಮೆ, ಸಹನೆ, ಸಾಮರ್ಥ್ಯ ತೋರುತ್ತಾರೆ.

ಮಕ್ಕಳನ್ನು ಹೆತ್ತು ಕೊಡಲು ಮಹಿಳೆಗೆ ಶುಲ್ಕ ಅಥವಾ ಕೂಲಿ ನಿಗದಿ ಮಾಡಲಾಗದು ಅಲ್ಲವೇ? ನಿಸರ್ಗದತ್ತ ಜೈವಿಕ ವ್ಯತ್ಯಾಸಗಳ ಕಾರಣದಿಂದ ಉತ್ಪಾದಕತೆ ಕಡಿಮೆಯಾಗಿ ನಷ್ಟವಾಗುತ್ತದೆ ಎಂಬ ಕಾರಣ ನೀಡಿ ಕಡಿಮೆ ಕೂಲಿ ಅಥವಾ ಕಡಿಮೆ ವೇತನ ನೀಡುವುದು ಸರಿಯಲ್ಲ. ಈ ಉತ್ಪಾದಕತೆಯ ನಷ್ಟ ನಿಸರ್ಗದ ಇನ್ನೊಂದು ಅಂಶದಲ್ಲಿ ಮಹಿಳೆಯಿಂದ ಸರಿದೂಗಲ್ಪಡುತ್ತದೆ. ಜನಸಂಖ್ಯೆಯ ಶೇ 50ರಷ್ಟು ಪ್ರಮಾಣದಲ್ಲಿರುವ ಮಹಿಳೆಯರ ಸಕ್ರಿಯ ಸಹಭಾಗಿತ್ವ ಖಾತರಿಪಡಿಸಲು ಸಮಾಜ ಇಂತಹ ತಾರತಮ್ಯ ಧೋರಣೆಗಳನ್ನು ಕೈಬಿಡಬೇಕು.

–ಡಾ. ಎಚ್.ಬಿ.ಚಂದ್ರಶೇಖರ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.