ADVERTISEMENT

ವಾಚಕರ ವಾಣಿ: ಕಾವ್ಯ ಸೃಷ್ಟಿಯೇ ಬೌದ್ಧಿಕ ಚಟುವಟಿಕೆಯಲ್ಲವೇ?

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 19:30 IST
Last Updated 8 ಜನವರಿ 2023, 19:30 IST

ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಬುದ್ಧಿಜೀವಿಗಳನ್ನು ಕೂಪಮಂಡೂಕತನಕ್ಕೆ ಹೋಲಿಸಿದ್ದು ಸರಿಯಲ್ಲ. ಹಾಗೆ ನೋಡಿದರೆ ಕಾವ್ಯ ಸೃಷ್ಟಿಯೇ ಒಂದು ಬೌದ್ಧಿಕ ಚಟುವಟಿಕೆಯಲ್ಲವೇ? ಸ್ವತಃ ಕವಿಯಾದ ದೊಡ್ಡರಂಗೇಗೌಡರು ಹೀಗೇಕೆ ಹೇಳಿದರೋ ಅರ್ಥವಾಗಲಿಲ್ಲ. ಯಾವುದೇ ಭಿನ್ನಾಭಿಪ್ರಾಯವನ್ನು ಸಹಿಸದಿರುವುದು ಸಹ ಸರ್ವಾಧಿಕಾರವಾಗುತ್ತದೆ. ಹಾಗೆಯೇ ‘ಸಹಜೀವನ ಸಂಪ್ರದಾಯ ನಾಡಿನ ಸಂಸ್ಕೃತಿಗೆ ವಿರುದ್ಧ’ ಎಂದಿದ್ದಾರೆ ಸಮ್ಮೇಳನದ ಅಧ್ಯಕ್ಷರು. ಸಹಜೀವನ ಸಂಪ್ರದಾಯ ‘ಉಡುಕಿ ಮದುವೆ’ ಎಂಬ ಹೆಸರಿನಿಂದ ನಮ್ಮ ಜನಪದ ಸಂಪ್ರದಾಯದಲ್ಲಿಎಂದಿನಿಂದಲೂ ಇದೆ, ಯಶಸ್ವಿಯೂ ಆಗಿದೆ. ಸಹಜೀವನವನ್ನು ತಪ್ಪಾಗಿ ಅರ್ಥೈಸುವುದರಿಂದ ಜಾನಪದ ಸಂಸ್ಕೃತಿಯನ್ನು ಅವಮಾನಿಸಿದಂತೆ ಆಗುವುದಿಲ್ಲವೇ?!

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT