ADVERTISEMENT

ಇದು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಶಿಕ್ಷೆಯೇ?

ಪ್ರೊ.ನಾಗರಾಜ ಶೆಣೈ ಬೆಂಗಳೂರು
Published 26 ಜೂನ್ 2018, 16:33 IST
Last Updated 26 ಜೂನ್ 2018, 16:33 IST

‘ಒಲ್ಲೆ, ನಾನೊಲ್ಲೆ’ ಎಂದು ಕಿರುಚಾಡಿದರೂ ಬಿಡದೆ, ಬಲವಂತವಾಗಿ ಜಿ.ಟಿ. ದೇವೇಗೌಡರನ್ನು ಉನ್ನತ ಶಿಕ್ಷಣ ಸಚಿವ ಸ್ಥಾನದಲ್ಲಿ ಪ್ರತಿಷ್ಠಾಪಿಸಿದುದರ ಹಿಂದಿನ ತರ್ಕವೇ ಅರ್ಥವಾಗಲಿಲ್ಲ.

‘ಯೋಗ್ಯ ವ್ಯಕ್ತಿಗೆ ಯೋಗ್ಯ ಸ್ಥಾನ’ (Right Man for the Right Job) ಎಂಬ ವಿಶ್ವಮಾನ್ಯ ತತ್ವಕ್ಕೆ ವಿರುದ್ಧವಾಗಿ, ‘ಕೆಲಸ ಮಾಡೋರಿಗೆ ಯಾವ ಖಾತೆ ಆದ್ರೇನು’ ಎಂಬ ಅಸಡ್ಡಾಳ ಸಮರ್ಥನೆಯೊಂದಿಗೆ ದೇವೇಗೌಡರಿಗೆ ನೀಡಿದ
ಖಾತೆ ನಿಜ ಅರ್ಥದಲ್ಲಿ ಅವರಿಗೆ ನೀಡಿದ ಶಿಕ್ಷೆಯೋ, ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಶಿಕ್ಷೆಯೋ ಅಥವಾ ಇವೆರಡೂ ಹೌದೋ ಎಂಬುದು ಗೊಂದಲಮಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT