ADVERTISEMENT

ಹಿಂದಿ: ಸಲ್ಲದ ಭೀತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:00 IST
Last Updated 19 ಜೂನ್ 2019, 20:00 IST

ಹಿಂದಿ ಕಲಿಕೆಯನ್ನು ಕೆಲವರು ಹೇರಿಕೆ ಎಂದು ಏಕೆ ಕರೆಯುತ್ತಿದ್ದಾರೋ ತಿಳಿಯುತ್ತಿಲ್ಲ. ಹಿಂದಿಯಿಂದ ಕನ್ನಡಕ್ಕೆ ಕುತ್ತು ಎನ್ನುವವರಿಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ ಕುತ್ತು ಒದಗುತ್ತದೆ ಎಂಬುದು ಗೊತ್ತಿಲ್ಲವೇ? ತ್ರಿಭಾಷಾ ಸೂತ್ರದ ಅನ್ವಯ ನಮ್ಮ ಮಕ್ಕಳು ಹಿಂದಿ ಕಲಿತರೆ ತೊಂದರೆಯೇನು?

ಹಿಂದಿ ಬಾರದ ಕಾರಣಕ್ಕೆ ಸಂಸತ್ತಿನಲ್ಲಿ ಕರ್ನಾಟಕದ ಪರ ಧ್ವನಿ ಪರಿಣಾಮಕಾರಿಯಾಗಿ ಕೇಳಿಸುತ್ತಿಲ್ಲ. ನಮ್ಮ ಬಹುಪಾಲು ಸಂಸದರಿಗೆ ಹಿಂದಿ ಮತ್ತು ಇಂಗ್ಲಿಷ್‌ ಮೇಲೆ ಪ್ರಭುತ್ವ ಇಲ್ಲದಿರುವುದು ಇದಕ್ಕೆ ಕಾರಣ. ಇಂಗ್ಲಿಷ್‌ ಬಗ್ಗೆ ಇಲ್ಲದ ಭೀತಿ ಹಿಂದಿ ಕುರಿತು ಏಕೆ?

–ಡಾ.ಕೆ.ಬಿ. ಬ್ಯಾಳಿ,ಕುಕನೂರು, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.