ADVERTISEMENT

ವಾಚಕರ ವಾಣಿ: ಇತಿಹಾಸ ಎಲ್ಲವನ್ನೂ ಒಳಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:30 IST
Last Updated 31 ಮೇ 2022, 19:30 IST

ಗಾಂಧೀಜಿ ಇತಿಹಾಸವನ್ನು ಒಪ್ಪಿಕೊಂಡರೆ ಗೋಡ್ಸೆ ಇತಿಹಾಸವನ್ನೂ ಒಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಮಹಾತ್ಮ ಗಾಂಧಿ ಹೇಗೆ ಸತ್ತರು ಎಂಬ ಪ್ರಶ್ನೆಗೆ ಉತ್ತರ ಸಿಗದು. ಇತಿಹಾಸವೇ ಹಾಗೆ. ಒಂದನ್ನು ಮರೆಮಾಚಿದರೆ ಮತ್ತೊಂದಕ್ಕೆ ಸ್ಪಷ್ಟ ಉತ್ತರ ಸಿಗದು. ನೀವು ಒಂದು ಪಂಥದ ಇತಿಹಾಸ ಮರೆಮಾಚಿದರೆ ಮತ್ತೊಂದು ಪಂಥದ ಬಗ್ಗೆ ಓದುವಾಗ ಗೊಂದಲ ಹುಟ್ಟುತ್ತದೆ, ಸುಳ್ಳು ಎನಿಸುತ್ತದೆ.

ಗಾಂಧಿ, ಹೆಡಗೇವಾರ್, ನಾರಾಯಣಗುರು, ಬಸವಣ್ಣ, ಗೋಡ್ಸೆ ಎಲ್ಲರೂ ಮುಖ್ಯ. ಇತಿಹಾಸದಲ್ಲಿ ಗೆದ್ದವರು, ಸೋತವರು, ಕೆಟ್ಟದ್ದು, ಒಳ್ಳೆಯದು ಎಲ್ಲವೂ ಇರಬೇಕು. ಆಗ ಇತಿಹಾಸಕ್ಕೆ ಚ್ಯುತಿ ಬರುವುದಿಲ್ಲ.

- ಸಣ್ಣಮಾರಪ್ಪ ಚಂಗಾವರ, ಶಿರಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.