ADVERTISEMENT

ಸ್ಪರ್ಧಾರ್ಥಿಗಳು ನಂಬುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 19:30 IST
Last Updated 12 ಆಗಸ್ಟ್ 2021, 19:30 IST

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರ ನೇಮಕವೇ ಅಕ್ರಮ ಎಂಬ ಆರೋಪ
ಕೇಳಿಬಂದಿರುವುದನ್ನು ತಿಳಿದು (ಪ್ರ.ವಾ., ಆ. 12) ಒಂದು ಕ್ಷಣ ದಿಗ್ಭ್ರಮೆಗೊಂಡೆ.

ದ್ವಿತೀಯ ದರ್ಜೆ ಸಹಾಯಕರಂತಹ ನೇಮಕಾತಿಗೂ ಅಭ್ಯರ್ಥಿಯ ಜನ್ಮದಿನಾಂಕ, ವಿದ್ಯಾರ್ಹತೆ, ಪ್ರಸ್ತುತ ಹುದ್ದೆಯ ನಿರಾಕ್ಷೇಪಣಾ ಪತ್ರ, ಜಾತಿ ಪ್ರಮಾಣಪತ್ರದಂತಹ ಪ್ರತಿಯೊಂದು ಮಾಹಿತಿಯನ್ನೂ ಕೆಪಿಎಸ್‌ಸಿ ಪ‍ಡೆಯುತ್ತದೆ. ಇಂತಹ ಸಾಂವಿಧಾನಿಕ ಸಂಸ್ಥೆಗೆ ಸದಸ್ಯ ಅಥವಾ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಅವರ ಅರ್ಹತೆಯ ಕನಿಷ್ಠ ಮಾಹಿತಿಯನ್ನೂ ಪಡೆಯದೆ ಆಯ್ಕೆ ಮಾಡುವುದು ಸೋಜಿಗ ಮೂಡಿಸುತ್ತದೆ. ಈಗಾಗಲೇ ಭ್ರಷ್ಟಾಚಾರ, ಪಕ್ಷಪಾತ, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಹಗರಣಗಳಿಗೆ ಸಂಸ್ಥೆ ಹೆಸರಾಗಿದೆ. ಈಗ ಅದರ ಅಧ್ಯಕ್ಷರ ಅರ್ಹತೆ ಬಗೆಗೇ ಅಪಸ್ವರ ಕೇಳಿಬಂದಿದೆ. ಇನ್ನು ಸ್ಪರ್ಧಾರ್ಥಿಗಳು ಸಂಸ್ಥೆಯನ್ನು ನಂಬುವುದಾದರೂ ಹೇಗೆ?

ಮೋನಿಕ ಆರ್.,ಚಿಕ್ಕಗೊಂಡನಹಳ್ಳಿ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.