ADVERTISEMENT

ಇಂದಿರಾ ಕ್ಯಾಂಟೀನ್‌ನಲ್ಲಿ ‘ಆರೋಗ್ಯ ಮಿತ್ರ’

ಮಹದೇವಪ್ಪ ಪಿ., ಮೈಸೂರು
Published 4 ಜುಲೈ 2019, 19:12 IST
Last Updated 4 ಜುಲೈ 2019, 19:12 IST

ಇಂದಿರಾ ಕ್ಯಾಂಟೀನ್ ಯೋಜನೆಯು ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಮಾಡಲುಎಷ್ಟೋ ಮಂದಿಗೆ ಅನುಕೂಲಕರವಾಗಿದೆ. ಪ್ರತಿದಿನ ಬೆಳಿಗ್ಗೆ ಒಂದೊಂದು ಬಗೆಯ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಅನ್ನ, ಸಾಂಬಾರ್ ಕೊಡುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ‘ಆರೋಗ್ಯಮಿತ್ರ’ ರಾಗಿ ಮುದ್ದೆಯನ್ನೂ ನೀಡಲು ಬಿಬಿಎಂಪಿ ನಿರ್ಧರಿಸಿರುವುದು ಸ್ವಾಗತಾರ್ಹ.

ಇದು ರಾಜ್ಯದಲ್ಲಿ ರಾಗಿ ಬಳಸುವ ಎಲ್ಲ ಪ್ರದೇಶಗಳ ಇಂದಿರಾ ಕ್ಯಾಂಟೀನ್‌ಗಳಿಗೂ ವಿಸ್ತರಣೆಯಾಗಲಿ. ಇತ್ತೀಚಿನ ದಿನಗಳಲ್ಲಿ, ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ರಾಗಿ ಮುದ್ದೆ ಊಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿರಾ ಕ್ಯಾಂಟೀನ್‍ಗಳಲ್ಲಿ ಮುದ್ದೆ ಊಟ ದೊರಕಿದರೆ ಜನರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕೇಂದ್ರಗಳತ್ತ ಬರುತ್ತಾರೆ. ಹಾಗೆಯೇ ಬೆಂಬಲ ಬೆಲೆಗೆ ರಾಗಿ ಖರೀದಿಸುವುದರಿಂದ ರೈತರಿಗೂ
ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT