ADVERTISEMENT

ವಿಮೆಯ ಲಾಭಾಂಶ ಬಡ್ಡಿಯಲ್ಲ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 15:30 IST
Last Updated 8 ಅಕ್ಟೋಬರ್ 2021, 15:30 IST

‘ಜೀವ ವಿಮೆ: ಈ ವಿಚಾರ ನೆನಪಿರಲಿ’ ಎಂಬ ಲೇಖನ (ಪ್ರ.ವಾ., ಅ. 4) ಕೆಲವು ಉತ್ತಮ ಸಲಹೆಗಳನ್ನು ಒಳಗೊಂಡಿದ್ದರೂ ಎಂಡೊಮೆಂಟ್, ಮನಿಬ್ಯಾಕ್ ಪಾಲಿಸಿಗಳ ಬಗ್ಗೆ ತಿಳಿಸಿರುವ ಅಭಿಪ್ರಾಯವು ಅಷ್ಟು ಸಮಂಜಸವಲ್ಲ. ಅವರು ಹೇಳುವ ‘ಶೇ 3ರಿಂದ 4ರಷ್ಟು ಬಡ್ಡಿ ಲಾಭ ಮಾತ್ರ ಸಿಗುತ್ತದೆ’ ಎಂಬುದು ತಪ್ಪು. ಇವುಗಳಲ್ಲಿ ಶೇ 5ರಿಂದ 6ರವರೆಗೆ ಲಾಭ ದೊರೆಯುತ್ತದೆ. ವಿಮೆಯ ಲಾಭಾಂಶವು ಬಡ್ಡಿಯಲ್ಲ ಬೋನಸ್ (ಒಬ್ಬರು ಎಲ್ಲರಿಗಾಗಿ ಮತ್ತು ಎಲ್ಲರೂ ಒಬ್ಬರಿಗಾಗಿ ಎಂಬುದು ವಿಮೆಯ ಪರಿಕಲ್ಪನೆ). ಇಂದು ಬ್ಯಾಂಕ್, ಅಂಚೆ ಕಚೇರಿ ಮುಂತಾದ ಕಡೆ ಹೂಡಿಕೆ ಮಾಡಿದರೂ ಇದಕ್ಕಿಂತ ಹೆಚ್ಚಿಗೆ ಲಾಭ ಸಿಗುವುದಿಲ್ಲ.

ಯಾವುದೇ ವಿಮೆಯಲ್ಲದ ಠೇವಣಿಗಳ ಮೇಲಿನ ಬಡ್ಡಿಯು ತೆರಿಗೆಯನ್ನು ಆಕರ್ಷಿಸುವ ವರಮಾನವಾಗಿರುತ್ತದೆ. ಆದರೆ ವಿಮಾ ಪಾಲಿಸಿಗಳಿಗೆ ನಾವು ಕಟ್ಟುವ ಪ್ರೀಮಿಯಂಗೆ u/s 80C ತೆರಿಗೆ ವಿನಾಯಿತಿ ಇದೆ ಮತ್ತು ಪಕ್ವತೆಯ ಮೊತ್ತವು ಎಷ್ಟೇ ಇರಲಿ u/s 10(10D) ತೆರಿಗೆಮುಕ್ತವಾಗಿರುತ್ತದೆ. ಮನಿಬ್ಯಾಕ್ ಪಾಲಿಸಿಯಲ್ಲಿ ಮಧ್ಯಂತರ ಹಣ ಪಾವತಿ ಆದರೂ ವಿಮಾ ಕವರೇಜ್ ಕಡಿಮೆ ಆಗುವುದಿಲ್ಲ. ಅವಧಿ ವಿಮೆಯು ವಿಮಾ ಪರಿಕಲ್ಪನೆಯನ್ನು
ಪೂರ್ಣಮಟ್ಟದಲ್ಲಿ ಬಿಂಬಿಸುವ ಪಾಲಿಸಿಯಾದರೂ ಅದರಲ್ಲಿ ಪಕ್ವತೆ ಎಂಬುದಿರುವುದಿಲ್ಲ. ಆದ್ದರಿಂದ ಕೆಳವರ್ಗ ಮತ್ತು ಮಧ್ಯಮವರ್ಗದವರನ್ನು ಆ ಪಾಲಿಸಿ ಅಷ್ಟು ಆಕರ್ಷಿಸುವುದಿಲ್ಲ. ಒಟ್ಟಿನಲ್ಲಿ ಜೀವ ವಿಮೆ ಇಂದು ಈ ಮೊದಲಿಗಿಂತ ಹೆಚ್ಚು ಎಲ್ಲರ ಆಯ್ಕೆಯಾಗಿದೆ ಎಂಬುದು ವಾಸ್ತವ ಅಷ್ಟೇ ಅಲ್ಲದೆ ಉತ್ತಮವಾದುದು ಆಗಿದೆ.

-ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.