ADVERTISEMENT

ವಾಚಕರ ವಾಣಿ: ಬೆವರುರಹಿತ ಕಾಯಕಕ್ಕೂ ಬೆಲೆ ಇದೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 19:30 IST
Last Updated 16 ಮಾರ್ಚ್ 2021, 19:30 IST

‘ದೇವರ ದೇವರು ಜನರ ಬೆವರು’ ಎಂಬ ಬರಗೂರು ರಾಮಚಂದ್ರಪ್ಪ ಅವರ ಲೇಖನಕ್ಕೆ ಪ್ರತಿಯಾಗಿ ವೆಂಕಟೇಶ ಮಾಚಕನೂರ ಅವರ ಪತ್ರವನ್ನು (ವಾ.ವಾ., ಮಾರ್ಚ್‌ 15) ಓದಿದಾಗ, ಬೆವರು ಮತ್ತು ಕಾಯಕದ ಬಗ್ಗೆ ಒಂದೆರಡು ಅನಿಸಿಕೆಗಳನ್ನು ಹೇಳಬೇಕೆನಿಸಿತು. ಒಬ್ಬ ವ್ಯಕ್ತಿ ಪಿಂಚಣಿಗೆ ಅರ್ಹನಾಗಬೇಕಾದರೆ ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಓದಿ, ಪದವಿ ಪಡೆದು, ಸ್ಪರ್ಧಾತ್ಮಕವಾಗಿ ಪೈಪೋಟಿಯಲ್ಲಿ ಉದ್ಯೋಗ ಪಡೆದು, ಹಲವು ಸಂದರ್ಭಗಳಲ್ಲಿ ಕುಟುಂಬದಿಂದ ದೂರ ಉಳಿಯಬೇಕಾಗಿ ಬಂದು, ಕೆಲವನ್ನೆಲ್ಲ ತ್ಯಾಗ ಮಾಡಿ, ಹಲವಾರು ಒತ್ತಡಗಳ ನಡುವೆಯೂ ಸಮತೋಲಿತವಾಗಿ ನೌಕರಿ ಮಾಡಬೇಕಾಗುತ್ತದೆ. ‌ಕೆಲಸದ ಒತ್ತಡ, ನಿರೀಕ್ಷೆ, ವೈಫಲ್ಯ ಇವೆಲ್ಲ ಉದ್ಯೋಗಿಗಳ ಆರೋಗ್ಯವನ್ನೂ ಹಾಳು ಮಾಡುವುದಿದೆ.

ಬೆವರಿನ ದುಡಿಮೆ ಎಂಬ ಸೆಂಟಿಮೆಂಟಲ್ ಶಬ್ದಗಳನ್ನು ತಿಂಗಳ ಸಂಬಳಕ್ಕೆ ಅಥವಾ ಪಿಂಚಣಿಗೆ ತಳಕು ಹಾಕುವುದು ನಿಜಕ್ಕೂ ಅಪಾಯಕಾರಿ ಪ್ರವೃತ್ತಿ. ಒಬ್ಬೊಬ್ಬರ ಕೆಲಸವನ್ನು, ವರಮಾನವನ್ನು, ದುಡಿತದ ರೀತಿಯನ್ನು ಹೋಲಿಸುವುದು ವಿದ್ಯೆಗೆ ಮಾಡುವ ಅಪಚಾರ. ಬೆವರಿನ ದುಡಿಮೆಗೆ ಸೂಕ್ತ ಪ್ರತಿಫಲ ಸಿಗಲೇಬೇಕು. ಹಾಗೆಯೇ ಬೆವರುರಹಿತ ಬೌದ್ಧಿಕ ಕಾಯಕದ ಬಗ್ಗೆಯೂ ಹಗುರವಾಗಿ ಮಾತನಾಡಬಾರದಲ್ಲವೇ?

-ಭರತ್ ಬಿ.ಎನ್., ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.