ADVERTISEMENT

ಐಪಿಎಲ್‌: ಪ್ರವೇಶ ನಿಷೇಧ ಅವಶ್ಯವೇ?

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 17:23 IST
Last Updated 8 ಮಾರ್ಚ್ 2021, 17:23 IST

ಐಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ನಿಷೇಧಿಸಿರುವುದು ಅತ್ಯಂತ ಬೇಸರದ ಸಂಗತಿ. ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಸ್ತುತ ನಡೆಯಲಿರುವ ಚುನಾವಣೆ ಕಾರಣದಿಂದ ಅನೇಕ ಬೃಹತ್ ಸಮಾವೇಶಗಳು ಮತ್ತು ರ‍್ಯಾಲಿಗಳು ನಡೆಯುತ್ತಿವೆ.

ಇವುಗಳಲ್ಲಿ ಲಕ್ಷಾಂತರ ಜನ ಭಾಗವಹಿಸುವುದಕ್ಕೆ ಅವಕಾಶ ಇರುವಾಗ, ಮನರಂಜನೆ ನೀಡುವ ಐಪಿಎಲ್ ಕ್ರೀಡೆಗೆ ಯಾಕೆ ಈ ನಿಷೇಧ? ರ‍್ಯಾಲಿ ಮತ್ತು ಸಮಾವೇಶಗಳಿಗೆ ಅನ್ವಯಿಸದ ಕೋವಿಡ್ ನಿಯಮ ಐಪಿಎಲ್‌ಗೆ ಮಾತ್ರ ಯಾಕೆ?

ಪ್ರಶಾಂತ್ ರೆಡ್ಡಿ ಎಸ್., ಚಿಕ್ಕಗೊಂಡನಹಳ್ಳಿ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.