ADVERTISEMENT

ಜೆಡಿಎಸ್‌ನಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆಯೇ?

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:45 IST
Last Updated 22 ಸೆಪ್ಟೆಂಬರ್ 2019, 19:45 IST

ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಅಪಸ್ವರ ಎತ್ತಿರುವುದನ್ನು ಜೆಡಿಎಸ್‌ ಮುಖಂಡ ವೈ.ಎಸ್.ವಿ.ದತ್ತ ತಮ್ಮ ಲೇಖನದಲ್ಲಿ ಖಂಡಿಸಿದ್ದಾರೆ (ಪ್ರ.ವಾ., ಸೆ 20). ದತ್ತ ಅವರು ಪ್ರತಿನಿಧಿಸುವ ಪಕ್ಷವು ದೇವೇಗೌಡರು ಮತ್ತು ಅವರ ಕುಟುಂಬದ ಸದಸ್ಯರೇ ಇರುವ ಪಕ್ಷ.

ಇಲ್ಲಿ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆ ಇದೆಯೇ ಎಂಬು ದನ್ನು ದತ್ತ ಅವರು ಸ್ಪಷ್ಟಪಡಿಸಬೇಕು. ನಿಖರ ರಾಜಕೀಯ ಸಿದ್ಧಾಂತವೇ ಇಲ್ಲದ, ಅಧಿಕಾರ ಹಿಡಿಯುವುದನ್ನೇ ಗುರಿಯಾಗಿಸಿಕೊಂಡ ಪ್ರಾದೇಶಿಕ ಪಕ್ಷಗಳು ರಾಜ ಕಾರಣದ ಸೈದ್ಧಾಂತಿಕ ಶಿಷ್ಟಾಚಾರಗಳನ್ನು ಮೂಲೆ ಗೊತ್ತಿ ಹೇಗೆ ಸ್ವಾರ್ಥ ರಾಜಕಾರಣ ಮಾಡುತ್ತಿವೆ ಎಂಬುದಕ್ಕೆ ರಾಜ್ಯದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ರಾಜಕೀಯ ವಿದ್ಯಮಾನಗಳೇ ಸಾಕ್ಷಿ.

ಇದರ ಸಿಂಹಪಾಲು ದತ್ತ ಅವರ ಪಕ್ಷದ್ದು ಎಂದು ಬೇರೆ ಹೇಳಬೇಕಾಗಿಲ್ಲ. ಪಕ್ಷದೊಳಗಿನ ನಿರಂಕುಶ ಪ್ರಭುತ್ವವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿ ರುವ ಅನೇಕರು ಅವರದೇ ಪಕ್ಷದಲ್ಲಿದ್ದಾರೆ. ದೇಶ ದಲ್ಲಿ ದ್ವಿಪಕ್ಷೀಯ ಪದ್ಧತಿ ಇರಬೇಕೆಂಬ ವಾದ ಈಗೀಗ ಹುಟ್ಟಿಕೊಂಡಿದ್ದಲ್ಲ. ಅದಕ್ಕೆ ದಶಕಗಳ ಇತಿಹಾಸವೇ ಇದೆ. ಅದನ್ನೇ ಶಾ ಪ್ರತಿಪಾದಿಸಿದ್ದಾರೆ.

ADVERTISEMENT

ಯಗಟಿ ಮೋಹನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.